ಮನೆ ರಾಜಕೀಯ ಧನದಾಹಿಗಳಾಗಿರುವ ಪೊಲೀಸರು: ಇಷ್ಟು ಒಳ್ಳೆಯ ಆಡಳಿತ ಇನ್ಯಾರು ಕೊಡ್ತಾರೆ ?- ಡಿಕೆಶಿ ವ್ಯಂಗ್ಯ

ಧನದಾಹಿಗಳಾಗಿರುವ ಪೊಲೀಸರು: ಇಷ್ಟು ಒಳ್ಳೆಯ ಆಡಳಿತ ಇನ್ಯಾರು ಕೊಡ್ತಾರೆ ?- ಡಿಕೆಶಿ ವ್ಯಂಗ್ಯ

0

ಬೆಂಗಳೂರು: ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಟ್ವೀಟ್‌ ಮಾಡಿದ್ದು, ಫಿಕ್ಸಿಂಗ್‌, ಮಾಮೂಲಿ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ‘ಅಭಿನಂದನೆಗಳು ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಅದರಲ್ಲೂ ಗೃಹ ಇಲಾಖೆಯ ದಕ್ಷತೆ ಬಗ್ಗೆ ದಿನಪತ್ರಿಕೆಯಲ್ಲಿ ಹಾಡಿ ಹೊಗಳಲಾಗಿದೆ. ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಫಿಕ್ಸಿಂಗ್‌, ಮಾಮೂಲ್‌ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ. ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ? ಬಿಜೆಪಿಯವರೇ ಇದಕ್ಕೇನಂತೀರಿ?’ ಎಂದು ಸಿಎಂ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಹಿಂದಿನ ಲೇಖನಶ್ರೀನಗರ ಗ್ರೇನೆಡ್ ದಾಳಿ: ಮತ್ತೋರ್ವ ಯುವತಿ ಸಾವು
ಮುಂದಿನ ಲೇಖನಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜತೆಗೆ ಪ್ರಧಾನಿ ಮೋದಿ ಮಾತು