ಮನೆ ರಾಜಕೀಯ ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ತನಿಖೆ ಬಗ್ಗೆ ಖರ್ಗೆ ಅಸಮಾಧಾನ

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ತನಿಖೆ ಬಗ್ಗೆ ಖರ್ಗೆ ಅಸಮಾಧಾನ

0

ಬೆಂಗಳೂರು(Bengaluru): ಪಿಎಸ್ ಐ ನೇಮಕಾತಿ ಹರಣದ  ಪ್ರಮುಖ ಆರೋಪಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನದ  ನಂರ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆದರೆ ಹಗರಣದ ತನಿಖೆ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರತು ಪ್ರತಿಕ್ರಿಯಿಸಿರುವ ಅವರು,ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಿ. ಅವರು ಯಾವುದೇ ಪಕ್ಷದವರು ಆದರೂ ಬಂಧಿಸಿ ಮತ್ತು ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.

“ಆಡಳಿತಯಂತ್ರ ಕುಸಿದಿದೆ, ಎಲ್ಲಿದೆ ನಿಮ್ಮ ಉತ್ತಮ ಆಡಳಿತ?” ಎಂದು ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದ್ದು, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ತನಿಖೆ ನಡೆಯುತ್ತಿರುವ ಸ್ವರೂಪವನ್ನು ಪ್ರಶ್ನಿಸಿದ್ದಾರೆ.

ಈ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಆಡಿಯೋವೊಂದು ಇದೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು. ಸಿಐಡಿ ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಖರ್ಗೆ ಪುತ್ರನಿಗೆ ನೋಟಿಸ್ ನೀಡಿತ್ತು. ಗುರುವಾರ ಅವರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದರು.

ಹಿಂದಿನ ಲೇಖನ545 ಪಿಎಸ್ ಐ ಹುದ್ದೆಗೆ ಮರುಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ: ಆರಗ ಜ್ಞಾನೇಂದ್ರ
ಮುಂದಿನ ಲೇಖನಜಾಮೀನು ನಿರಾಕರಿಸಲು ಕೇವಲ ಇತರ ಪ್ರಕರಣಗಳಲ್ಲಿ ಭಾಗಿಯಾಗುವುದು ಮಾತ್ರ ಆಧಾರವಾಗುವುದಿಲ್ಲ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್