ಮನೆ ರಾಜ್ಯ ಪಿಎಸ್ಐ ನೇಮಕಾತಿ ಅಕ್ರಮ: ಪ್ರಭಾವಿಯಾಗಿದ್ದರು ಬಂಧಿಸಲಾಗುವುದು; ಸಿಎಂ ಬೊಮ್ಮಾಯಿ

ಪಿಎಸ್ಐ ನೇಮಕಾತಿ ಅಕ್ರಮ: ಪ್ರಭಾವಿಯಾಗಿದ್ದರು ಬಂಧಿಸಲಾಗುವುದು; ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ (Hubli)- ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (PSI Recruitment Scandal)  ಭಾಗಿಯಾದವರು ಎಷ್ಟೇ ಪ್ರಭಾವಿಯಾಗಿದ್ದರು ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನಿರೀಕ್ಷೆ ಗಿಂತ ಹೆಚ್ಚಿನ ವಿಚಾರಗಳು ಹೊರಬೀಳುತ್ತಿವೆ. ಅಕ್ರಮದಲ್ಲಿ‌ ಭಾಗಿಯಾದವರ ಬಂಧನಕ್ಕೆ ಸೂಚನೆ‌ ನೀಡಲಾಗಿದೆ. ಎಷ್ಟೇ ಪ್ರಭಾವಿ ಇರಲಿ, ಎಷ್ಟೇ ಕ್ಷಾಣಾಕ್ಷ ಇದ್ದರು ಬಂಧಿಸುವಂತೆ ಸೂಚಿಸಲಾಗಿದೆ. ನೇಮಕಾತಿ ನ್ಯಾಯ ಸಮ್ಮತವಾಗಿದ್ದರೆ ಜನರಿಗೆ ನ್ಯಾಯ ಸಿಗಲಿದೆ ಎಂದರು.

ಹುಬ್ಬಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಸಾಮಾನ್ಯ ಗಲಭೆ‌ ಎಂದು ಪರಿಗಣಿಸಿಲ್ಲ. ಇದರ ಹಿಂದೆ ಷಡ್ಯಂತ್ರ ಇದೆ. ಪೊಲೀಸ್ ಠಾಣೆಯನ್ನೇ ಟಾರ್ಗೆಟ್ ಮಾಡಿ, ಸಂಚಿತ ದಾಳಿ ನಡೆಸಲಾಗಿದೆ. ಕೆಲವೇ ದಿನದಲ್ಲಿ ಇದರ ಹಿಂದಿನ ಅಸಲಿಯತ್ತು ಬಯಲಿಗೆ ಬರಲಿದೆ ಎಂದರು.

ಡಿಜೆ ಹಳ್ಳಿ – ಕೆಜೆ ಹಳ್ಳಿ ಗಲಭೆಯಲ್ಲಿ ಯಾವ ರೀತಿ ಕ್ರಮ ಆಗಿದೆ. ಇಲ್ಲೂ ಕ್ರಮ ಆಗಲಿದೆ. ಕಠಿಣ ಕ್ರಮ ಅಂದ್ರೆ ಹಲವಾರು ಕ್ರಮಗಳಿವೆ. ಕಠಿಣ ಕ್ರಮದ ವಿಚಾರದಲ್ಲಿ ಕರ್ನಾಟಕವೇ ಮಾದರಿ ಎಂದು ತಿಳಿಸಿದರು.

ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ಸಮಗ್ರವಾದ ತನಿಖೆ‌ನಡೆಯುತ್ತಿದೆ. ಇ-ಮೇಲ್ ಎಲ್ಲಿಂದ ಬಂತು, ಯಾವ ದೇಶದಿಂದ ಬಂದಿದೆ, ಯಾರು ಕಳಿಸಿದ್ದಾರೆ ಎಲ್ಲವನ್ನೂ ತನಿಖೆ ನಡೆಸಲಾಗುವುದು ಹೇಳಿದರು.

ಏ.27 ರಂದು ಮೋದಿ ಅವರೊಂದಿಗೆ ಸಂವಾದ: ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸೂಚನೆ ನೀಡಿದೆ‌‌. ಸ್ವತಃ ಪ್ರಧಾನಮಂತ್ರಿಗಳೇ ವಿಡಿಯೋ ಕಾನ್ಪರೆನ್ಸ್ ಕರೆದಿದ್ದಾರೆ. ಏ.27 ರಂದು ಪ್ರಧಾನಮಂತ್ರಿಗಳ ಜೊತೆ ಸಂವಾದ ನಡೆಯಲಿದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಪ್ರಧಾನಿಗಳ ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ. ತಜ್ಞರು ಈಗಾಗಲೇ ವೈರಸ್ ಯಾವ ಮಾದರಿ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಎಂದು ತಿಳಿಸಿದರು.

ಹಿಂದಿನ ಲೇಖನದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ: ಸಚಿವ ಸ್ಥಾನಕ್ಕೆ ರಮೇಶ್‌ ಜಾರಕಿಹೊಳಿ ಕಸರತ್ತು
ಮುಂದಿನ ಲೇಖನಅದ್ಧೂರಿಯಾಗಿ ಜರುಗಿದ ಹಾಸನದ ಶೆಟ್ಟಾಳಮ್ಮ-ಸಂತ್ಯಮ್ಮ ಜಾತ್ರಾ ಮಹೋತ್ಸವ