ಮನೆ ಅಪರಾಧ ಚುಂಚಿ ಫಾಲ್ಸ್ ನಲ್ಲಿ ಮುಳುಗಿ ಪದವಿ ವಿದ್ಯಾರ್ಥಿ ಸಾವು

ಚುಂಚಿ ಫಾಲ್ಸ್ ನಲ್ಲಿ ಮುಳುಗಿ ಪದವಿ ವಿದ್ಯಾರ್ಥಿ ಸಾವು

0

ಬೆಂಗಳೂರುಕನಕಪುರ ತಾಲೂಕಿನ ಪ್ರವಾಸಿ ತಾಣ ಚುಂಚಿ ಫಾಲ್ಸ್​​ಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನಲ್ಲಿ ಸರ್ಜಾಪುರದ ಖಾಸಗಿ ವಿವಿಯಲ್ಲಿ ಬಿಎ ಪದವಿ  ವ್ಯಾಸಂಗ ಮಾಡುತ್ತಿದ್ದ ಉತ್ತರಕಾಂಡ ಮೂಲದ ವಿದ್ಯಾರ್ಥಿ ಅಂಬರ್ ಗಂಗೊಲ ಮೃತ ವಿದ್ಯಾರ್ಥಿ. ಆತನ ತಂದೆಯೂ ಅದೇ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು.

ಐದು ಜನ ಸ್ನೇಹಿತರೊಂದಿಗೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಚುಂಚಿ ಫಾಲ್ಸ್ ಗೆ ಬೆಳಗ್ಗೆ 7 ಗಂಟೆ ಸಮಯಕ್ಕೆ ಬಂದಿದ್ದರು, ಅಂಬರ್ ಗಂಗೊಳ ಈಜಲು ನೀರಿಗಿಳಿದಿದ್ದ, 2-3 ಸುತ್ತು ಈಜಿದ ನಂತರ ಗಂಗೋಳ ದಣಿದು ಮುಳುಗಲು ಪ್ರಾರಂಭಿಸಿ. ಈ ವೇಳೆ ಆತನ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಕೂಡಲೇ ಆತನ ಸ್ನೇಹಿತರು ಸ್ಖಳೀಯ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ತಡವಾಗಿತ್ತು. ವಿದ್ಯಾರ್ಥಿ ಶವಕ್ಕಾಗಿ ಸಾತನೂರು ಪೊಲೀಸರು ಶೋಧ ಕಾರ್ಯ ಆರಂಭಿಸಿ ಶವ ಹೊರಕ್ಕೆ ತೆಗೆದಿದ್ದಾರೆ. 

ಉತ್ತರಕಾಂಡ ಮೂಲದ ಅಂಬರ್ ಗಂಗುಲ ದೊಮ್ಮಸಂದ್ರದಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದು ಇಂದು ಬೆಳಿಗ್ಗೆ ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಚುಂಚಿ ಫಾಲ್ಸ್ ಗೆ ಆಗಮಿಸಿದ್ದ. ಶನಿವಾರ ರಾತ್ರಿ ಸ್ನೇಹಿತರೊಂದಿಗೆ ನಂದಿ ಬೆಟ್ಟಕ್ಕೆ ತೆರಳಿ ಆಲ್ಕೋಹಾಲ್ ಸೇವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ