ಮನೆ ರಾಜ್ಯ ಪಿಎಸ್ಐ ಅಕ್ರಮ: ದಿವ್ಯಾ ಹಾಗರಗಿ ಸೇರಿ 7 ಆರೋಪಿಗಳು 11 ದಿನ ಸಿಐಡಿ ಕಸ್ಟಡಿಗೆ

ಪಿಎಸ್ಐ ಅಕ್ರಮ: ದಿವ್ಯಾ ಹಾಗರಗಿ ಸೇರಿ 7 ಆರೋಪಿಗಳು 11 ದಿನ ಸಿಐಡಿ ಕಸ್ಟಡಿಗೆ

0

ಬೆಂಗಳೂರು (Bengaluru)-ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ (Divya Hagaragi) ಸೇರಿದಂತೆ ಏಳು ಆರೋಪಿಗಳನ್ನು 11 ದಿನಗಳ ಕಾಲ ಸಿಐಡಿ (CID) ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಕಲಬುರಗಿಯ 3ನೇ ಜೆಎಂಎಫ್‌ಸಿ ಕೋರ್ಟ್‌ ಎಲ್ಲಾ ಏಳು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 11 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿದೆ.

ಪ್ರಮುಖ ಆರೋಪಿ ದಿವ್ಯ ಹಾಗರಗಿ ಹಾಗೂ ಇತರೆ ಆರೋಪಿಗಳಾದ ಅರ್ಚನಾ, ಸುನೀತಾ, ಕಾಳಿದಾಸ್‌, ಸುನೀತಾ ಪಾಟೀಲ್‌, ಸುರೇಶ್ ಕಾಟೇಗಾವ್‌, ಸದ್ದಾಂ ಅವರನ್ನು ಸಿಐಡಿ ವಶಕ್ಕೆ ನೀಡಲಾಗಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಲೇಡಿ ಕಿಂಗ್ ಪಿನ್ ದಿವ್ಯಾ ಹಾಗರಗಿ ಮತ್ತು ಗ್ಯಾಂಗ್ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿತ್ತು. ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದಾಗಿನಿಂದ ಮೂರು ತಂಡಗಳಾಗಿ ಶೋಧ ನಡೆಸುತ್ತಿದ್ದ ಸಿಐಡಿ ತಂಡ ಕೊನೆಗೂ ದಿವ್ಯಾ ಹಾಗರಗಿ ಮತ್ತು ಅವರ ಗ್ಯಾಂಗ್ ನ್ನು ಮಹಾರಾಷ್ಟ್ರದ ಪುಣೆಯಲ್ಲಿ ಹೊಟೇಲ್ ನಲ್ಲಿ ಬಂಧಿಸಿತ್ತು.

ಹಿಂದಿನ ಲೇಖನಆತ್ಮಹತ್ಯೆಗೆ ಯತ್ನಿಸಿದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ
ಮುಂದಿನ ಲೇಖನಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿದು ಹೆಡ್‌ ಕಾನ್‌ ಸ್ಟೇಬಲ್‌ ಮೃತ