ಬೆಂಗಳೂರು(Bengaluru): ಮಾರ್ಚ್ 2023ರಲ್ಲಿ ನಡೆಯುವ ದ್ವಿತೀಯ ಪಿಯು ಪರೀಕ್ಷೆ ತೆಗೆದುಕೊಳ್ಳುವ ಪುನರಾವರ್ತಿತ, ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಭರಿಸಲು ಅ.31ರವರೆಗೆ ಅವಕಾಶ ವಿಸ್ತರಿಸಲಾಗಿದೆ.
ದಿನಕ್ಕೆ 50ರಂತೆ ದಂಡ ಶುಲ್ಕದೊಂದಿಗೆ ನ.15ರವರೆಗೂ ಶುಲ್ಕ ಪಾವತಿಸಬಹುದು. ಮೊದಲು ಶುಲ್ಕ ಭರಿಸಲು ಅ.10 ಕೊನೆಯ ದಿನವಾಗಿತ್ತು. ಖಾಸಗಿಯಾಗಿ ಪಿಯು ಓದಲು ಇಚ್ಚಿಸುವ ವಿದ್ಯಾರ್ಥಿಗಳೂ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅ.10ರಿಂದ ಹೆಸರು ನೋಂದಾಯಿಸಿಕೊಂಡು, ಪರೀಕ್ಷಾ ಶುಲ್ಕ ಪಾವತಿಸಲು ಅನುಮತಿ ನೀಡಲಾಗಿದೆ.
ಅಂತಹ ವಿದ್ಯಾರ್ಥಿಗಳ ವಯಸ್ಸು ಮಾರ್ಚ್ 31, 2023ಕ್ಕೆ 17 ವರ್ಷ ತುಂಬಬೇಕು. 2022ರ ಜೂನ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಎಸ್’ಎಸ್’ಎಲ್’ಸಿ ಪರೀಕ್ಷೆ ತೇರ್ಗಡೆಯಾಗಿರಬೇಕು. ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಅ.31ರ ಒಳಗೆ ಪರೀಕ್ಷಾ ಶುಲ್ಕ ಪಾವತಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.