ಮನೆ ಮನರಂಜನೆ `ಜೇಮ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್: ಅಪ್ಪುವಿನ ಯೋಧನ ಲುಕ್ ಮೆಚ್ಚಿದ ಫ್ಯಾನ್ಸ್

`ಜೇಮ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್: ಅಪ್ಪುವಿನ ಯೋಧನ ಲುಕ್ ಮೆಚ್ಚಿದ ಫ್ಯಾನ್ಸ್

0

ಪವರ್ ಸ್ಟಾರ್ , ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್  ಕೊನೆಯದಾಗಿ ನಟಿಸಿದ ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್ ಗಣರಾಜ್ಯೋತ್ಸವ ದಿನವಾದ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಮನಗೆದ್ದಿದೆ.

ಪುನೀತ್ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್ ೧೭ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’  ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಹೊಸದಾಗಿ ರಿಲೀಸ್ ಆಗಿರುವ ಪೋಸ್ಟರ್ ಈ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ದುಪ್ಟಟ್ಟು ಮಾಡಿದೆ. ಅಪ್ಪು ಅಗಲಿಕೆ ನೋವಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ.

ಹೊಸ ಪೋಸ್ಟರ್ ನಲ್ಲಿ ಯೋಧನ ಲುಕ್: ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗಿರುವ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಅಪ್ಪು ನಡೆದುಕೊಂಡು ಬರುತ್ತಿರುವ ಪೋಸ್ಟರ್ ಇದಾಗಿದೆ. ಗಡಿ ಕಾಯುವ ಸೈನಿಕನಂತೆ ಅಪ್ಪು ಅವರ ಗೆಟಪ್ ಇದೆ. ಹೀಗಾಗಿ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಿದ್ದಾರೆ ಅವರ ಅಭಿಮಾನಿಗಳು.

೧೦೧ ಈಡುಗಾಯಿ ಒಡೆದ ಅಭಿಮಾನಿಗಳು: ಪುನೀತ್ ರಾಜ್ಕುಮಾರ್ ಅವರ ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ, ಅಪ್ಪು ಅಭಿಮಾನಿಗಳು ಪುನೀತ್ ಸ್ಮಾರಕದ ಎದುರು ೧೦೧ ಈಡುಗಾಯಿ ಹೊಡೆದಿದ್ದಾರೆ. ಕಂಠೀರವ ಸ್ಟುಡಿಯೋಗೆ ಅಭಿಮಾನಿಳ ದಂಡೆ ಆಗಮಿಸಿದೆ. ಅಪ್ಪು ನಮ್ಮ ಜೊತೆ ಇಲ್ಲದಿರುವುದನ್ನು ನೆನೆಸಿಕೊಂಡು ಮರುಕ ಪಡುತ್ತಿದ್ದಾರೆ.

ಹಿಂದಿನ ಲೇಖನಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕಿ ಶೀಲಾ ದಿವಾಕರ್ ನಿಧನ
ಮುಂದಿನ ಲೇಖನಸಂವಿಧಾನ ವಕೀಲರ ದಾಖಲೆಯಲ್ಲ, ಪ್ರತಿ ಮಕ್ಕಳು ಅಧ್ಯಯನ ಮಾಡಬೇಕು: ಸಚಿವ ಡಾ.ಕೆ.ಸುಧಾಕರ್