ಮನೆ ಕಾನೂನು ವಸತಿ ಭೂಮಿಯಾಗಿ ಮಾರ್ಪಾಡದ ಕೃಷಿ ಭೂಮಿ ಖರೀದಿ ಅಕ್ರಮವಲ್ಲ: ಹೈಕೋರ್ಟ್‌

ವಸತಿ ಭೂಮಿಯಾಗಿ ಮಾರ್ಪಾಡದ ಕೃಷಿ ಭೂಮಿ ಖರೀದಿ ಅಕ್ರಮವಲ್ಲ: ಹೈಕೋರ್ಟ್‌

0

ಬೆಂಗಳೂರು (Bengaluru)- ಕೃಷಿ ಭೂಮಿಯನ್ನು ವಸತಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದ ಬಳಿಕ ಅದನ್ನು ಖರೀದಿಸುವುದು ಅಕ್ರಮವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಈ ರೀತಿಯ ಭೂಮಿಯನ್ನು ಖರೀದಿಸಿದರೆ ಅದು ಕರ್ನಾಟಕ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
 
ರಾಮನಗರದ ಶೇಷಗಿರಿ ಹಳ್ಳಿಯಲ್ಲಿದ್ದ ಭೂಮಿಯೊಂದನ್ನು ವಸತಿ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡು ಮಾಡಾಗಿತ್ತು. ಇದು  ಮೂಲತಃ ಮಂಜೂರು ಭೂಮಿಯಾಗಿದ್ದು, ಮೂರು ಎಕರೆಗಳಷ್ಟು ಭೂಮಿಯನ್ನು ಟಿಬೆಟಿಯನ್ ಮಕ್ಕಳ ಗ್ರಾಮ ಖರೀದಿಸಿತ್ತು. ಈ ಬಗ್ಗೆ ಉಂಟಾಗಿದ್ದ ತಕರಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದು ಭೂಮಿ ಖರೀದಿಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ. 

ಕಾಯ್ದೆಯ ಪ್ರಕಾರ ಎಸ್ ಸಿ/ ಎಸ್ ಟಿ ಗಳಿಗೆ ಮಂಜೂರಾಗಿರುವ ಭೂಮಿಯನ್ನು ವರ್ಗಾವಣೆ ಮಾಡುವಂತಿಲ್ಲ. 1978 ರಲ್ಲಿ ಗಿರಿಯಪ್ಪ ಎಂಬವವರಿಗೆ ಈ ಜಮೀನು ಮಂಜೂರಾಗಿತ್ತು. ಇದನ್ನು 1996 ರಲ್ಲಿ ಗಿರಿಯಪ್ಪ ಟಿ ಪ್ರಸನ್ನ ಗೌಡ ಎಂಬುವವರಿಗೆ ಮಾರಾಟ ಮಾಡಿದ್ದರು. ಪ್ರಸನ್ನ ಗೌಡ ಎಂಬವರು ಈ ಭೂಮಿಯನ್ನು ಕೆಎಲ್ ಆರ್ ಕಾಯ್ದೆಯ ಪ್ರಕಾರ ಭೂಮಿಯನ್ನು ಪರಿವರ್ತಿಸಿ ನೋಂದಾಯಿತ ಸೊಸೈಟಿಯಾಗಿರುವ ಟಿಬೆಟಿಯನ್ ಮಕ್ಕಳ ಗ್ರಾಮಕ್ಕೆ ನೀಡಿದ್ದರು. ಗಿರಿಯಪ್ಪ ಎಂಬುವವರ ವಂಶಸ್ಥರು ಇದನ್ನು 2006 ರಲ್ಲಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು.