ಮನೆ ಜ್ಯೋತಿಷ್ಯ ಪೂರ್ವ ಭಾದ್ರಪದ:  ಪ್ರಥಮ ದ್ವಿತೀಯ ತೃತೀಯ ಪಾದ

ಪೂರ್ವ ಭಾದ್ರಪದ:  ಪ್ರಥಮ ದ್ವಿತೀಯ ತೃತೀಯ ಪಾದ

0

ಕ್ಷೇತ್ರ- ಕುಂಭ ರಾಶಿಯಲ್ಲಿ 20 ಡಿಗ್ರಿ ಯಿಂದ 30 ಡಿಗ್ರಿ. ರಾಶಿ ಸ್ವಾಮೀ – ಶನಿ,ನಕ್ಷತ್ರ ಸ್ವಾಮಿ -ಗುರು ಗಣ-ಮನುಷ್ಯ,ನಾಡಿ -ಆದ್ಯ, ಯೋನಿ -ಸಿಂಹ, ನಾಮಾಕ್ಷರ-ಶೆ, ಸೋ, ದಾ, ಶರೀರಭಾಗ- ಪದದಸಂದಧಿ.  ನಾಡಿಗಳು ಪಾದದ ಮಾಂಸಖಂಡ .

ರೋಗಗಳು: ಹೃದಯದ ಅನಿಯಮಿತತನವ ಕಾರ್ಯಾಜಲೋದರ, ಕಾಲು ಬೆಳ್ಳಗಾಗುವುದು ಕಾಲುಸಂಧಿನ ಭಾವು, ಹೃದಯ ವಿಸ್ತಾರವಾಗುವದು, ಕಡಿಮೆ ರಕ್ತದೊತ್ತಡ.

 ಸಂರಚನೆ: ಉತ್ತಮ ಮಾನವೀಯ ವ್ಯವಹಾರ ಮಾಡುವದು, ಆಶಾವಾದಿ, ದಾರ್ಶನಿಕ, ಮಿತ್ರ ಪ್ರೇಮಿ, ಸತ್ಯವಾದಿ ವಿಶ್ವಾಸ ಪಾತ್ರ ಸಂಶೋಧಕ,ವಿಮರ್ಶಕ,ವಿಜ್ಞಾನ, ಶಿಕ್ಷಣಗಳಲ್ಲಿ ಆಸಕ್ತಿ ಹೊಂದಿರುವದು ನಿಯಮಿತ ಜೀವನ ನಡೆಸುವದು. ಚತುರ, ಉದಾರನಾಗುವದು.  ನಿಸ್ವಾರ್ಥತೆ ಲಗ್ನದಲ್ಲಿ ಪಾಪ ಗ್ರಹಗಳಿದ್ದರೆ ಮಾನವ ಕೆಟ್ಟವನಾಗುವನು, ವೈಶ್ಯಾಗಾಮಿ,ಢಾಕು, ಕೊಲೆಗಡುಕ ಚಿತಾಕ್ರಾಂತನಾಗುವನು.ಅಶಾಂತಿ ಪೂರ್ವ ಜೀವನ ನಡೆಸಬಹುದು. 

ಉದ್ಯೋಗ, ವಿಶೇಷಣೆಗಳು: ಆಧ್ಯಾಪಕ, ವಿಜ್ಞಾನಿ, ಖಗೋಲ ಜ್ಯೋತಿಷಿ ಆಯುರ್ವೇದ ಚಿಕಿತ್ಸೆ, ಶೇರುಪೇಟೆ,ನಗರನಿರ್ಮಾಣ ಪಾಲಿಕೆ,ಶೇರ ದಾಲಾಲ, ಹಣಕಾಸಿನ ಕಾರ್ಯ ನಿರ್ವಹಿಸುವವ, ಆದಾಯಕರ ವಿಮಾ ಇತ್ಯಾದಿ ವಸೂಲಿ ಮಾಡುವವ, ಭ್ರಷ್ಟಾಚಾರದ ವಿರುದ್ಧ ಕಾರೄ ಮಾಡುವವ ಗುಪ್ತಚರ, ಸೇವಾ ನೌಕರ, ಪ್ರಕಾಶಕ, ಮುದ್ರಕ, ರಕ್ಷಕ, ಪರಿಪಾಲಕ, ಪರಿವಾರ ನಿಯೋಜಕನಗಬಹುದು.

ಶನಿಯ ರಾಶಿಯಲ್ಲಿ ಗುರು ನಕ್ಷತ್ರದಲ್ಲಿ ಹುಟ್ಟಿದವರು ಈಶ್ವರನ ಭಕ್ತರು, ಸಂಕೋಚ ಸ್ವಭಾವದವರು, ಪೂಜಾರಿ ಪಾದ್ರಿ ಆಗಬಯಸುವವರು ಯಾತ್ರಾ ಪ್ರಿಯ, ಕವಿ, ಲೇಖಕ, ಶಿಕ್ಷಣ ತಜ್ಞರಾಗಬಹುದಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು. ಬಾಲ್ಯದಲ್ಲಿ ಕಷ್ಟಪಟ್ಟರೂ

 ವೃದ್ಧಾವಸ್ಥೆಯಲ್ಲಿ ಪಡೆಯುವವರು -ಶನಿಗ್ರಹ ಶುಭವಾಗಿದ್ದರೆ 20 -30 ವರ್ಷ ಆ ವ್ಯಕ್ತಿಗೆ ಭಾಗ್ಯ ಉಂಟಾಗುವುದು- ಸೂರೄನು ಈ ನಕ್ಷತ್ರದಲ್ಲಿ ಪಾಲ್ಗುಣ ಮಾಸದ ಅಂತಿಮ 10 ದಿನ ವಿರುತ್ತಾನೆ ಚಂದ್ರನು 18 ಗಂಟೆಯಿರುತ್ತಾನೆ.

ಹಿಂದಿನ ಲೇಖನ5, 8, 9ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಮುಂದಿನ ಲೇಖನಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರೂ. ಆಮಿಷವೊಡ್ಡಿದೆ: ಸಿಎಂ ಸಿದ್ದರಾಮಯ್ಯ