ಮನೆ ರಾಷ್ಟ್ರೀಯ ಭಾರತವನ್ನು ಬೆಂಬಲಿಸಿ ಟ್ರಂಪ್‌ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್‌

ಭಾರತವನ್ನು ಬೆಂಬಲಿಸಿ ಟ್ರಂಪ್‌ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್‌

0

ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೂಟಾಟಿಕೆಯನ್ನು ಬಯಲು ಮಾಡಿದ್ದಾರೆ.

ಅಮೆರಿಕ ಈಗಲೂ ನಮ್ಮಿಂದ ಪರಮಾಣು ಇಂಧನವನ್ನು ಖರೀದಿಸುತ್ತಿರುವಾಗ ಭಾರತ ಯಾಕೆ ಕಚ್ಚಾ ತೈಲ ಖರೀದಿಸಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಪ್ರಶ್ನಿಸಿದ್ದಾರೆ.

ಭಾರತಕ್ಕೆ ಬರುವ ಮೊದಲೇ ರಷ್ಯಾದಲ್ಲಿ ಭಾರತದ ಮಾಧ್ಯಮಕ್ಕೆ ಪುಟಿನ್‌ ವಿಶೇಷ ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ರಷ್ಯಾದಿಂದ ತೈಲ ಖರೀದಿಸದಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹಾಕುತ್ತಿರುವ ಬಗ್ಗೆ ಪ್ರಶ್ನೆ ಕೇಳಲಾಯಿತು.

ಅಮೆರಿಕ ತನ್ನ ಪರಮಾಣು ವಿದ್ಯುತ್ ಸ್ಥಾವರಗಳಿಗಾಗಿ ನಮ್ಮಿಂದ ಪರಮಾಣು ಇಂಧನವನ್ನು ಖರೀದಿಸುತ್ತಿದೆ. ಅಮೆರಿಕವು ನಮ್ಮ ಇಂಧನವನ್ನು ಖರೀದಿಸುವ ಹಕ್ಕನ್ನು ಹೊಂದಿದ್ದರೆ, ಭಾರತವು ಅದೇ ಸವಲತ್ತು ಏಕೆ ಹೊಂದಿರಬಾರದು ಎಂದು ಪ್ರಶ್ನಿಸಿದರು.

ಅಮೆರಿಕ ಈ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದ್ದರೆ ಭಾರತ ಅದೇ ರೀತಿಯ ವ್ಯವಹಾರ ಯಾಕೆ ಪರಿಶೀಲನೆಗೆ ಒಳಗಾಗಬಾರದು ಎಂದು ಅವರು ಹೇಳಿದರು.

ಆರಂಭದಲ್ಲಿ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ ಟ್ರಂಪ್‌ 25% ಸುಂಕವನ್ನು ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 50% ಸುಂಕವನ್ನು ಹೇರಿದ್ದಾರೆ.