ಮನೆ ಕ್ರೀಡೆ ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಪಿ.ವಿ.ಸಿಂಧು

ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಪಿ.ವಿ.ಸಿಂಧು

0

ಬರ್ಮಿಂಗ್​ಹ್ಯಾಮ್(birmingham)​: ಕಾಮನ್​ವೆಲ್ತ್​​ ಗೇಮ್ಸ್​​ನ ಮಹಿಳೆಯರ ಸಿಂಗಲ್ಸ್​ ಫೈನಲ್​​​ನಲ್ಲಿ ಪಿ.ವಿ.ಸಿಂಧು ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಿಗಿದಿದೆ.

ಫೈನಲ್ ಪಂದ್ಯದಲ್ಲಿ ಕೆನಡಾ ಸ್ಪರ್ಧಾಳು ವಿರುದ್ಧ 21-15 21-13 ಅಂತರದಿಂದ ಸಿಂಧು ಗೆಲುವು ದಾಖಲಿಸಿದರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಜಿಯಾ ಮಿನ್ ವಿರುದ್ಧ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದ್ದರು.

ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಇಲ್ಲಿಯವರೆಗೆ 19 ಚಿನ್ನ, 15 ಬೆಳ್ಳಿ, 22 ಕಂಚಿನೊಂದಿಗೆ ಒಟ್ಟು 56 ಪದಕ ಸಂಪಾದಿಸಿದೆ. ಈ ಮೂಲಕ ಪದಕಗಳ ಸಾಲಿನಲ್ಲಿ 4ನೇ ಸ್ಥಾನದಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ: ಮಹಿಳಾ ಸಿಂಗಲ್ಸ್​​ ಬ್ಯಾಡ್ಮಿಂಟನ್​​ನಲ್ಲಿ ಚಿನ್ನ ಗೆದ್ದಿರುವ ಪಿ.ಪಿ. ಸಿಂಧು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಸಿಂಧು ಚಾಂಪಿಯನ್​​ಗಳ ಚಾಂಪಿಯನ್​ ಆಗಿದ್ದಾರೆ. ಆಟದಲ್ಲಿ ಅವರ ಬದ್ಧತೆ ನಿಜಕ್ಕೂ ವಿಸ್ಮಯಕಾರಿ. ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು, ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆ ಎಂದಿದ್ದಾರೆ.

ಹಿಂದಿನ ಲೇಖನದೇಶ ಆರ್ಥಿಕ, ಸಾಮಾಜಿಕವಾಗಿ ಬೆಳೆದಿರುವುದಕ್ಕೆ ಸಂವಿಧಾನ ಮತ್ತು ಕಾಂಗ್ರೆಸ್ ಕಾರಣ: ಸಿದ್ದರಾಮಯ್ಯ
ಮುಂದಿನ ಲೇಖನತಿರಂಗಾ ಡಿಪಿ ಬದಲಿಸುವ ಪ್ರಧಾನಿ ಕರೆ ಆರ್’ಎಸ್’ಎಸ್ ಗೆ ಅನ್ವಯಿಸುವದಿಲ್ಲವೇ? : ಕಾಂಗ್ರೆಸ್ ಪ್ರಶ್ನೆ