ಮನೆ ರಾಜಕೀಯ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇಬೇಕು: ರಾಹುಲ್ ಗಾಂಧಿ

ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇಬೇಕು: ರಾಹುಲ್ ಗಾಂಧಿ

0

ಬೆಂಗಳೂರು: ಕರ್ನಾಟಕದಲ್ಲಿ ಇರುವುದು ಅನೈತಿಕ ಬಿಜೆಪಿ ಸರ್ಕಾರ. ಮುಂದಿನ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆಲ್ಲುವ ಗುರಿ ಹೊಂದಬಾರದು. 150 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ  ರಾಹುಲ್ ಗಾಂಧಿ ಕರೆಯಿತ್ತರು.

ನಾವು ಇಷ್ಟ-ಕಷ್ಟದ ಆಧಾರದ ಮೇಲೆ ಮಣೆ ಹಾಕಲ್ಲ. 20 ವರ್ಷಗಳ ಹಿಂದೆ ಮಾಡಿದ್ದು ಈಗ ನಡೆಯೋದಿಲ್ಲ. ಪಕ್ಷಕ್ಕೆ ಕೆಲಸ ಮಾಡುವವರನ್ನ ಪಕ್ಷ ರಕ್ಷಣೆ ಮಾಡುತ್ತದೆ. ಕಡಿಮೆ ಅಂತರದಲ್ಲಿ ಗೆಲ್ಲಲು ಎಲೆಕ್ಷನ್​ನಲ್ಲಿ ಸ್ಪರ್ಧಿಸಬಾರದು. 150 ಸ್ಥಾನಗಳಲ್ಲಿ ಒಂದೂ ನಂಬರ್ ಕಡಿಮೆಯಾಗಬಾರದು. ಕರ್ನಾಟಕದಲ್ಲಿ 150 ಸ್ಥಾನಗಳನ್ನ ಗೆಲ್ಲುವುದು ಕಷ್ಟವಲ್ಲ. ಒಗ್ಗಟ್ಟಾಗಿ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು.ನಾವು ನಮ್ಮ ಕಾರ್ಯಕರ್ತರನ್ನ ಮರೆಯಬಾರದು. ಕಾಂಗ್ರೆಸ್ ಸರ್ಕಾರ ಬಂದರೆ ಕಾರ್ಯಕರ್ತರಿಗೆ ಅಧಿಕಾರ ನೀಡುವುದಾಗಿ ಹೇಳಿದರು.

ಕರ್ನಾಟಕದಲ್ಲಿ ಎಂದೂ ಕಾಂಗ್ರೆಸ್ ಸ್ಪಿರಿಟ್ ಇದೆ. ಇದು ಅತ್ಯಂತ ನೈಸರ್ಗಿಕ ಕಾಂಗ್ರೆಸ್ ರಾಜ್ಯ. ಇಲ್ಲಿರುವುದು ಅನೈತಿಕ ಬಿಜೆಪಿ ಸರ್ಕಾರ. ಮುಂದೆ ಏನಾಗುತ್ತದೆ ಎಂಬ ಅರಿವು ಹೊಂದಬೇಕು. ಈ ಬಗ್ಗೆ ನಮಗೆ ಸ್ಪಷ್ಟತೆ ಇರಲಿ. ನಾವು 150 ಸೀಟ್ ಗೆಲ್ಲಲೇ ಬೇಕು, ಇದು ಕಷ್ಟ ಅಲ್ಲ. ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು. ನಾವು ನಾಯಕರನ್ನ ಇಷ್ಟ ಕಷ್ಟದ ಆಧಾರ ಮೇಲೆ ಮಣೆ ಹಾಕೋಲ್ಲ. ಯಾರು ಕೆಲಸ ಮಾಡ್ತಾ ಇದಾರೆ ಅನ್ನೋ ಆಧಾರದ ಮೇಲೆ ಕೆಲಸ ಮಾಡ್ತೀವಿ. 20 ವರ್ಷದ ಹಿಂದೆ ಏನ್ ಮಾಡಿದ್ದಾರೆ ಅನ್ನೋದು ನಡೆಯೋಲ್ಲ. ಇಂದು ಏನು ಮಾಡ್ತಾ ಇದಾರೆ, ಆತನಿಗೆ ಪಕ್ಷ ನಿಷ್ಠೆ ಇದೆಯಾ? ಕೆಲಸ ಮಾಡ್ತಾ ಇದಾರೆ ಅನ್ನೋದನ್ನ ಆಧರಿಸಿ ಪಕ್ಷ ಅವರ ರಕ್ಷಣೆ ಮಾಡುತ್ತೆ ಎಂದು ರಾಹುಲ್ ಹೇಳಿದರು.

ಹಿಂದಿನ ಲೇಖನಪಠ್ಯದಲ್ಲಿ ಶಿವಕುಮಾರ ಸ್ವಾಮೀಜಿ ಜೀವನ ಚರಿತ್ರೆ ಅಳವಡಿಸುವಂತೆ ಬಿಎಸ್ ವೈ ಒತ್ತಾಯ
ಮುಂದಿನ ಲೇಖನಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ: ಅಮಿತ್ ಶಾ