ಮನೆ ಅಪರಾಧ ಬಾಲಕಿ ಮೇಲೆ ಅತ್ಯಾಚಾರ: ನಿವೃತ್ತ ಪೊಲೀಸ್ ಅಧಿಕಾರಿ ಬಂಧನ

ಬಾಲಕಿ ಮೇಲೆ ಅತ್ಯಾಚಾರ: ನಿವೃತ್ತ ಪೊಲೀಸ್ ಅಧಿಕಾರಿ ಬಂಧನ

0

ಬೆಂಗಳೂರು: ತನ್ನ ಬಾಡಿಗೆ ಮನೆಯ ಅಪ್ರಾಪ್ತೆಯ ಮೇಲೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು ಪೊಲೀಸ್ ಸಬ್‌ ಇನ್ಸ್‌ ಪೆಕ್ಟರ್ ಆಗಿ ನಿವೃತ್ತರಾಗಿರುವ 74 ವರ್ಷದ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತನ್ನ ಮಗಳು ಕೆಳಗೆ ಬಿದ್ದಿದ್ದ ಆಟಿಕೆ ತರಲು ನೆಲ ಮಹಡಿಗೆ ಹೋಗಿದ್ದಳು. ಅದಾದ ಕೆಲಹೊತ್ತಿನವರೆಗೂ ಆಕೆ ಹಿಂತಿರುಗದ ಕಾರಣ, ತಾನು ಕೂಗಿಕೊಂಡೆ. ಆಗ ತನ್ನ 7 ವರ್ಷದ ಮಗು ದಯನೀಯ ಸ್ಥಿತಿಯಲ್ಲಿ ಮನೆಗೆ ಮರಳಿದಳು.

ಕಣ್ಣೀರು ಹಾಕುತ್ತಿದ್ದ ಸಂತ್ರಸ್ತೆ ತನಗಾದ ಕಷ್ಟವನ್ನು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಇದನ್ನು ಪ್ರಶ್ನಿಸಿದ ಸಂತ್ರಸ್ತೆಯ ತಂದೆಗೆ ಆರೋಪಿಯ ಪುತ್ರ ಬೆದರಿಕೆ ಹಾಕಿದ್ದಾನೆ. ಆತನೂ ಪೊಲೀಸ್ ಅಧಿಕಾರಿ ಎನ್ನಲಾಗಿದೆ.

ನಿವೃತ್ತ ಸಬ್‌ ಇನ್ಸ್‌ ಪೆಕ್ಟರ್‌ ನ ಮಗ, ಈ ಘಟನೆಯನ್ನು ಯಾರಿಗೂ ಬಹಿರಂಗಪಡಿಸದೆ ಹಣ ತೆಗೆದುಕೊಂಡು ಬಾಡಿಗೆ ನಿವಾಸವನ್ನು ಖಾಲಿ ಮಾಡುವಂತೆ ಹೇಳಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

ಆರೋಪಿ ಹಾಗೂ ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಬಾಲಕಿ ತಂದೆಗೆ ಬೆದರಿಕೆ ಹಾಕಿದ ಮತ್ತು ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದ್ದಕ್ಕಾಗಿ ನಿವೃತ್ತ ಸಬ್‌ ಇನ್ಸ್‌ಪೆಕ್ಟರ್‌ ನ ಮಗನ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿಂದಿನ ಲೇಖನವರಂಗಲ್ ನಲ್ಲಿ ರಸ್ತೆ ಅಪಘಾತ: ಐವರು ಸಾವು
ಮುಂದಿನ ಲೇಖನಬಂಡೀಪುರ ಅಭಯಾರಣ್ಯದಲ್ಲಿ ಹರಡುತ್ತಿರುವ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ