ಮನೆ ವ್ಯಕ್ತಿತ್ವ ವಿಕಸನ ನೆನಪಿನ ಹಂತಗಳು

ನೆನಪಿನ ಹಂತಗಳು

0

ಪ್ರತಿಯೊಬ್ಬರೂ ತಮ್ಮ ನೆನಪಿನ ಶಕ್ತಿ ಜಾಸ್ತಿಯಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಔಷಧ ಮಾಡಿಸಲು ಹೊರಡುವವರೂ ಇದ್ದಾರೆ. ಆದರೆ ನೆನಪು ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿಯೇ ಔಷಧಗಳು, ಟಾನಿಕ್ ಗಳು ಇಲ್ಲ. ಆದರೆ ಶಾರೀರಿಕ ದೌರ್ಬಲ್ಯದ ಕಾರಣದಿಂದಾಗಿ ನೆನಪು ಶಕ್ತಿ ಕಡಿಮೆಯಾಗಿದ್ದರೆ ಟಾನಿಕ್ ಗಳ ಬಳಕೆಯಿಂದ ಶಾರೀರಿಕ ದೌರ್ಬಲ್ಯ ಹೊರಟು ಹೋಗಿ ಹೆಚ್ಚು ನೆನಪುಗಳು ಉಳಿಯಲು ಸಾಧ್ಯವಾಗುತ್ತದೆ.

ಯೋಗ-ಧ್ಯಾನದಂತಹ ಕ್ರಿಯೆಗಳಿಂದ ಏಕಾಗ್ರತೆ ಮತ್ತು ಧಾರಣ ಶಕ್ತಿಗಳು ಹೆಚ್ಚಾಗಿ, ಹೆಚ್ಚು ನೆನಪು ಉಳಿಯಲು ಸಾಧ್ಯವಾಗುತ್ತದೆ. ಇದನ್ನು ಬಿಟ್ಟರೆ ಚೆನ್ನಾಗಿ ನೆನಪುಉಳಿಯಬೇಕೆನ್ನುವವರು ಸರಿಯಾದ ವಿಧಾನದಲ್ಲಿ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ನೆನಪಿನ ಹಂತಗಳನ್ನು ತಿಳಿದುಕೊಳ್ಳುವುದು ಸರಿಯಾದ ಅಭ್ಯಾಸಕ್ಕೆ ಸಹಾಯವಾಗುತ್ತದೆ.

ವಿಚಾರಗಳು ನೆನಪುಗಳಾಗಿ ಪರಿವರ್ತನೆಗೊಳ್ಳುವುದರ ಮೊದಲನೇ ಹಂತವೇ ಮುದ್ರಣ. ಈ ಹಂತದಲ್ಲಿ ಕಲಿತ ವಿಚಾರಗಳು ಮನಸ್ಸಿನ ಮೇಲ್ಪದರಕ್ಕೆ ತಲುಪುತ್ತದೆ. ಅಲ್ಲಿ ದಾಖಲಾಗಿ ಮಾನಸಿಕ ಚಿತ್ರವಾಗಿ ರೂಪಗೊಳ್ಳುತ್ತದೆ. ಆದರೆ ಇಷ್ಟರಿಂದಲೇ ನೆನಪಾಗಿ ಉಳಿಯುವುದಿಲ್ಲ. ಯಾವುದು ಅಗತ್ಯಕ್ಕೆ ನೀವು ತಾಶಿಲ್ದಾರ್ ಕಚೇರಿಯ ದೂರವಾಣಿ ಸಂಖ್ಯೆಯನ್ನು ಪಡೆದು ಮಾತನಾಡುತ್ತಿರುತ್ತೀರಿ. ಅರ್ಧ ಗಂಟೆ ಕಳೆದ ಬಳಿಕ ತಹಸಿಲ್ದಾರ್ ಕಛೇರೆ ದೂರವಾಣಿ ಸಂಖ್ಯೆಯನ್ನು ನಿಮ್ಮ ಬಳಿ ಕೇಳಿದರೆ ನಿಮಗೆ ನೆನಪಿರುವುದಿಲ್ಲ. ಯಾಕೆಂದರೆ ಅದು ಮುದ್ರಣದ ಹಂತದಲ್ಲೇ ಮುಕ್ತಾಯವು ಆಗಿರುತ್ತದೆ. ಮುದ್ರಣ ಹಂತದಲ್ಲಿ ಮಾನಸಿಕ ಚಿತ್ರವಾದ್ದದ್ದು ಮನಸ್ಸಿನಲ್ಲಿ ಧಾರಣೆಯಾಗಿದ್ದರೆ ಆಗ ಅದು ನೆನಪಾಗಿ ಉಳಿದುಕೊಳ್ಳುತ್ತದೆ. ಇದನ್ನು ಧಾರಣೆಯ ಹಂತವೆಂದು ಕರೆಯುತ್ತಾರೆ.

ಧಾರಣೆಯ ಸಾಮರ್ಥ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಮುದ್ರಣಗೊಂಡು ಧಾರಣೆಯಾಗಬೇಕಾದರೆ ಮುದ್ರಿತವಾದ ವಿಚಾರವನ್ನು ಮತ್ತೆ ಮತ್ತೆ ಆಲೋಚಿಸಬೇಕು. ಅಭ್ಯಾಸಿಸಬೇಕು. ಆದರೆ ಕೇವಲ ಧಾರಣೆಗೊಂಡರೆ  ಸಾಲುವುದಿಲ್ಲ. ಸೂಕ್ತ ಸಮಯಕ್ಕೆ ನೆನಪಿಗೆ ಬಾರದೆ ಇದ್ದರೆ ಧಾರಣೆಯಾಗಿ ಏನು ಉಪಯೋಗವಾದಂತಾಯಿತು. ಧಾರಣೆಯಾದ ವಿಷಯಗಳು ಮರುಕಳಿಕೆ ಹಂತಕ್ಕೆ ತಲುಪಬೇಕು. ಮನಸ್ಸಿನಲ್ಲಿ ಚಿಂತಿಸುವ ಮೂಲಕ ಅಥವಾ ಬರಿಯೋ ಮೂಲಕ ಅಥವಾ ಹೇಳುವ ಮೂಲಕ ಮುದ್ರಣ ಗೊಂಡ ವಿಷಯಗಳನ್ನು ಪುನರಾವರ್ತನೆಗೆ ಮಾಡುತ್ತಿದ್ದ ಹಾಗೆಲ್ಲ ವಿಷಯಗಳು ಮರುಕಳಿಕೆ ಹಂತವನ್ನು ತಲುಪುತ್ತದೆ. ಮರುಕಳಿಕೆಯ ಶಕ್ತಿಯು ಬೆಳೆದರೆ ಕಲಿತದ್ದು ಸಾರ್ಥಕವಾಗುತ್ತದೆ. ಈ ಹಂತವನ್ನು ದಾಟಿದರೆ ವಿಷಯಗಳು ಅಭಿಜ್ಞಾನದ ಹಂತವನ್ನು ತಲುಪುತ್ತದೆ. ತಂದೆಯ ಧ್ವನಿ, ತಾಯಿಯ ರೂಪ ಎಂದಾಗೆಲ್ಲ ನೆನಪು ವ್ಯಕ್ತಿತ್ವವನ್ನು ಗುರುತಿಸುತ್ತದೆ ಇದು ಅಭಿಜ್ಞಾನದ ಹಂತ.

ಹಿಂದಿನ ಲೇಖನವಿದ್ಯುತ್ ಕ್ಷಾಮ: ಕೃತಕ  ಅಭಾವವಲ್ಲ ಎಂದ ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಹೆಚ್.ಐ.ವಿ ಮಕ್ಕಳಿಗೆ ಇಮ್ಯೂನೈಜೇಷನ್