ಬೆಂಗಳೂರು: ಇಂದಿನಿಂದ ಕರ್ನಾಟಕದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿನ(ದರ 3) ರೂಪಾಯಿ ಹೆಚ್ಚಳವಾಗಿದೆ.
ಹಾಲಿನ ಬೆಲೆ ಏರಿಕೆ ಕೆಎಂಫ್ ಎಂಡಿ ಕೆಎಂಎಫ್ ಎಂಡಿ ಜಗದೀಶ್ ಮಾತನಾಡಿ, ದರ ಕಡಿಮೆ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ರೈತರ ಆದಾಯವನ್ನು ಗಮನದಲ್ಲಿಟ್ಟುಕೊಂಡು ದರ ಹೆಚ್ಚಳ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ. 39 ರೂಪಾಯಿ ಇದ್ದ ನಂದಿನಿ ಹಾಲಿನ ದರ ಈಗ 42 ರೂ. ಆಗಿದೆ. ಆಂಧ್ರ ಪ್ರದೇಶದಲ್ಲಿ ಲೀಟರ್ ಹಾಲಿಗೆ 56 ರೂ., ಕೇರಳದಲ್ಲಿ 51 ರೂ. ಇದೆ. ಮಹಾರಾಷ್ಟ್ರದಲ್ಲಿ 54 ರೂ., ತಮಿಳುನಾಡಿನಲ್ಲಿ ಹಾಲಿಗೆ 44 ರೂ. ಇದೆ ಎಂದು ಮಾಹಿತಿ ನೀಡಿದರು.
ಹಾಲಿನ ದರ ಎಷ್ಟಿದೆ ?
ಟೋನ್ಡ್ ಹಾಲು ನೀಲಿ ಪಾಕೆಟ್ ನ ದರ ಪ್ರತಿ ಲೀಟರ್ ಹಿಂದೆ 39 ರೂಪಾಯಿ ಇತ್ತು. ಪರಿಷ್ಕೃತ ದರ 42 ರೂಪಾಯಿಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಹಸುವಿನ ಹಾಲು ಹಿಂದೆ ಪ್ರತಿ ಲೀಟರ್ ಗೆ 40 ರೂಪಾಯಿ ಇತ್ತು.. ಇದು ಇಂದಿನಿಂದ 43 ರೂಪಾಯಿ ಆಗಲಿದೆ. ಅದೇ ರೀತಿ ಶುಭಂ ಅಂದ್ರೆ ಕೇಸರಿ ಪಾಕೆಟ್ ಅಥವಾ ಸ್ಪೆಷಲ್ ಹಾಲಿನ ದರ ಹಿಂದೆ ಪ್ರತಿ ಲೀಟರ್ ಗೆ 45 ರೂಪಾಯಿ ಇದ್ದು, ಪರಿಷ್ಕೃತ ದರ 48 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ಮೊಸರು ಪ್ರತಿ ಲೀಟರ್‌ಗೆ ಹಿಂದೆ 47 ರೂಪಾಯಿ ಇತ್ತು. ಇಂದಿನಿಂದ ಪ್ರತಿ ಲೀಟರ್ ಮೊಸರಿನ ಬೆಲೆ 50 ರೂಪಾಯಿಗೆ ಹೆಚ್ಚಳವಾಗಿದೆ. ಉಳಿದಂತೆ 200 ಮಿಲಿ ಪಾಕೆಟ್ ನ ನಂದಿನಿ ಮಜ್ಜಿಗೆ ಬೆಲೆ ಹಿಂದೆ 7 ರೂಪಾಯಿ ಇತ್ತು.. ಪರಿಷ್ಕೃತ ದರ 9 ರೂಪಾಯಿಗೆ ಹೆಚ್ಚಳವಾಗಿದೆ.