ಮನೆ ರಾಷ್ಟ್ರೀಯ ವಾಣಿಜ್ಯ ಬಳಕೆ ಸಿಲಿಂಡರ್‌ ದರ 25 ರೂ. ಹೆಚ್ಚಳ

ವಾಣಿಜ್ಯ ಬಳಕೆ ಸಿಲಿಂಡರ್‌ ದರ 25 ರೂ. ಹೆಚ್ಚಳ

0

ಹೊಸದಿಲ್ಲಿ : ತತ್‌’ಕ್ಷಣದಿಂದಲೇ ಅನ್ವಯವಾಗುವಂತೆ ಭಾನುವಾರದಿಂದ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ ದರವನ್ನು 25 ರೂ. ಏರಿಕೆ ಮಾಡಿವೆ.

ಇದರಿಂದಾಗಿ ಬೆಂಗಳೂರಿನಲ್ಲಿ 19 ಕೆ.ಜಿ. ಸಿಲಿಂಡರ್‌ ದರ 1,685.50 ರೂ.ಗಳಾದರೆ ದಿಲ್ಲಿಯಲ್ಲಿ 1,769 ರೂ, ಮುಂಬಯಿಯಲ್ಲಿ 1,721 ರೂ. ಹಾಗೂ ಚೆನ್ನೈಯಲ್ಲಿ 1,971 ರೂ. ಆಗಲಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಳೆದ ವರ್ಷ ಒಟ್ಟು ನಾಲ್ಕು ಬಾರಿ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಕಂಪೆನಿಗಳು ಹೆಚ್ಚಳ ಮಾಡಿದ್ದವು.

ಹಿಂದಿನ ಲೇಖನಲಂಚ ಕೇಳುವುದು ತಪ್ಪಲ್ಲ, ಸ್ವೀಕರಿಸುವುದು ತಪ್ಪು: ಹೈಕೋರ್ಟ್
ಮುಂದಿನ ಲೇಖನನೋಟು ರದ್ದತಿ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್