ಮುಂಬೈ(Mumbai): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿರುವಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.
ಶುಕ್ರವಾರ ಹಣಕಾಸು ನೀತಿ ಪ್ರಕಟಿಸಿದ ಅವರು, ರೆಪೊ ದರ ಹೆಚ್ಚಳ ಮಾಡಿರುವುದನ್ನು ಘೋಷಿಸಿದ್ದು, ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ರೆಪೊ ದರ ಈಗ ಶೇ 5.4 ಆಗಿದೆ ರೆಪೊ ದರ ಏರಿಕೆಯಿಂದಾಗಿ ಗೃಹ, ವಾಹನ ಹಾಗೂ ಇತರ ಸಾಲಗಳ ಬಡ್ಡಿ ದರ ಇನ್ನಷ್ಟು ಜಾಸ್ತಿ ಆಗಲಿದೆ.