ಮನೆ ಸಾಹಿತ್ಯ ಹಾಸ್ಯಲೋಕವನ್ನು ತಲುಪಿ

ಹಾಸ್ಯಲೋಕವನ್ನು ತಲುಪಿ

0

ಒಮ್ಮೆ ಗುರುಗಳು ಹುರುಪಿನಲ್ಲಿದ್ದರು. ಇದನ್ನು ನೋಡಿದ  ಅವರ ಶಿಷ್ಯರು ಭಗವಂತನ ಅನ್ವೇಷಣೆಯಲ್ಲಿ ಅವರು ಯಾವ ಹಂತಗಳನ್ನು ದಾಟಬೇಕಾಯಿತೆಂದು ಕೇಳಿದರು. “ ಭಗವಂತ ನನ್ನನ್ನು ಕೈಹಿಡಿದು ಕರ್ಮಭೂಮಿಯಲ್ಲಿ ಮುನ್ನೆಡೆಸಿದ. ಅಲ್ಲಿ ನಾನು ಹಲವಾರು ವರ್ಷಗಳ ಕಾಲ ಇದ್ದೆ. ನಂತರ ಅವನು ನನ್ನನ್ನು ದುಃಖ ಭೂಮಿಗೆ ಕೊಂಡೊಯ್ದ. ಅಲ್ಲಿ ನನ್ನ ಹೃದಯದಲ್ಲಿದ್ದ ಎಲ್ಲಾ ಅನಗತ್ಯ ಬಂಧನಗಳು ಕಳಚುವವರೆಗೆ ಇದ್ದೆ. ಆಗ ಪ್ರೇಮದ  ವಶಕ್ಕೆ ಬಂದೆ. ಅದು ನನ್ನಲ್ಲಿ ಅಳಿದುಳಿದ ನಾನು ಎಂಬುದನ್ನು ತನ್ನ ಉರಿವ ಜ್ವಾಲೆಯಿಂದ ಸುಟ್ಟುಹಾಕಿತು. ನಂತರ ಭಗವಂತ ನನ್ನ ಆಶ್ಚಾರ್ಯಚಕಿತ  ಕಣ್ಣುಗಳಿಗೆ ಬದುಕು ಮತ್ತು ಸಾವುಗಳ ರಹಸ್ಯವನ್ನು ಪ್ರಕಟಗೊಳಿಸಿದ ಮೌನಲೋಕಕ್ಕೆ  ನನ್ನನ್ನು ಕರೆದುಕೊಂಡು.”

“ ಅದು ನಿಮ್ಮ ಅನ್ವೇಷಣೆಯ ಕೊನೆಯ ಹಂತವಾಗಿತ್ತೇ ? “ ಎಂದು ಶಿಷ್ಯರು ಕೇಳಿದರು.

“ಇಲ್ಲ” ಎಂದು ಗುರುಗಳು ಹೇಳುತ್ತಾ ತಮ್ಮ ಮಾತುಗಳನ್ನು ಮುಂದುವರೆಸಿದರು.

ಪ್ರಶ್ನೆಗಳು : 1. ಗುರುಗಳು ತಮ್ಮ ಶಿಷ್ಯರಿಗೆ ಇನ್ನೇನು ಹೇಳಿದರು ? 2. ಈ ಕಥೆಯ ನೀತಿಯೇನು ?

ಉತ್ತರಗಳು : 1. “ಒಂದುದಿನ ಭಗವಂತ ಕೇಳಿದನು: ʼನಾನು ಇಂದು ನಿನ್ನನ್ನು ದೇವಾಲಯದ ಆಂತರಧಾಮಕ್ಕೆ  ಅಂದರೆ ಭಗವಂತನ ಹೃದಯಕ್ಕೆ ಕರೆದೊಯ್ಯುವೆ.ʼ ನನ್ನನ್ನು ಹಾಸ್ಯಲೋಕಕ್ಕೆ ಕರೆದೊಯ್ಯಲಾಯಿತು.

2.ನೀವು ನಗುವಾಗ ಸಂತೋಷದಿಂದಿರುತ್ತಿರಿ, ನಿಮಗೆ ಸಂತೋಷವಾಗಿದ್ದಾಗ ದ್ವೇಷ, ಅಸಮಧಾನ, ಅಸೂಯೆ, ಅಥವಾ ಇತರೆ ನಕಾರಾತ್ಮಕ ಭಾವನೆಗಳು ಇರುವುದಿಲ್ಲ. ನಕಾರಾತ್ಮಕ ಭಾವನೆಗಳಿಲ್ಲದೇ ಕಡೆ ಪ್ರೇಮ ಹಾಗೂ ಅನುಕಂಪ ನೆಲೆಸುತ್ತದೆ. ಇದು ಆಧ್ಯಾತ್ಮಿಕತೆಯ ಕೊನೆ ಹಂತ. ಇದನ್ನು ಯಾರಾದರೂ ಕೇವಲ ನಗು, ನಗು, ನಗುವಿನಿಂದಲೇ ಸುಲಭವಾಗಿ ಸಾಧಿಸಬಹುದು.

ಹಿಂದಿನ ಲೇಖನಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥಗೊಂಡ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು: ಆಸ್ಪತ್ರೆಗೆ ದಾಖಲು
ಮುಂದಿನ ಲೇಖನಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಗೆ ಹಲ್ಲೆ: ಆರೋಪಿ ಬಂಧನ