ಒಂದು ದಿನ ಮುಂಜಾನೆ ತಮ್ಮ ಸ್ಟುಡಿಯೋ ಪ್ರವೇಶಿಸಿದ ಚಾರ್ಲ್ಸ್ ಬೇಯರ್ ರಿಗೆ ಆ ದಿನ ಹೇಗೆನಿಸುತ್ತಿದೆ ಎಂದು ಯಾರೋ ಕೇಳಿದರು. ಆಗ ಅವರು “ನಿಧಾನವಾಗಿ ಸಾಯುತ್ತಿದ್ದೇನೆ ”ಎಂದರು.
ಪ್ರಶ್ನೆಯನ್ನು ಕೇಳಿದ ವ್ಯಕ್ತಿಗೆ ಆಘಾತವಾದಂತಾಯಿತು.ಅವರು “ನಿಮಗೆ ಏನಾಗಿದೆ? ”ಎಂದು ಕೇಳಿದಾಗ “…”ಎಂದು ಬೇಯರ್ ಉತ್ತರಿಸಿದರು.
ಪ್ರಶ್ನೆಗಳು :
1. ಚಾರ್ಲ್ಸ್ ಬೇಯರ್ ರವರ ಉತ್ತರವೇನಾಗಿತ್ತು?
2. ಈ ಕಥೆಯ ನೀತಿಯೇನು?
ಉತ್ತರಗಳು :
1. “ನಾನು ಹುಟ್ಟಿದ ದಿನದಿಂದಲೇ ಸಾಯಲಾರಂಭಿಸಿದೆ”.
2. ಮನುಷ್ಯನ ಬದುಕಿನಲ್ಲಿ ಸಾವೆಂಬುದು ಖಚಿತ. ಆದರೂ ಅವನು ಅದನ್ನು ಒಪ್ಪಲು ಬಹಳ ಕಷ್ಟ ಪಡುತ್ತಾನೆ. ನಾವು ಒಂದು ದಿನ ಸಾಯುತ್ತೇವೆಂದು ನಂಬಲು ಇಷ್ಟಪಡುವುದಿಲ್ಲ.ಆದರೆ ನಾವು ಹುಟ್ಟಿದಾಗಲೇ ಸಾವಿನತ್ತ ಪ್ರಯಾಣ ಮಾಡುತ್ತಿರುವುದು ಒಂದು ವಾಸ್ತವ ಸತ್ಯ.ಈ ಸರಳ ಸತ್ಯವನ್ನು ಅರಿತವನು ಎಂದು ಸಾವಿಗೆ ಹೆದರುವುದಿಲ್ಲ.