ಮನೆ ಸುದ್ದಿ ಜಾಲ ತಂಬಾಕು ಬೆಳೆಯ ಪರವಾನಗಿ ನವೀಕರಿಸುವ ಶುಲ್ಕು ಕಡಿಮೆ: ತಂಬಾಕು ಮಂಡಳಿ

ತಂಬಾಕು ಬೆಳೆಯ ಪರವಾನಗಿ ನವೀಕರಿಸುವ ಶುಲ್ಕು ಕಡಿಮೆ: ತಂಬಾಕು ಮಂಡಳಿ

0

ಮೈಸೂರು (Mysuru)-ಸಂಸದ ಪ್ರತಾಪ್ ಸಿಂಹ ಅವರ ಮನವಿ‌ ಮೇರೆಗೆ 2022- 23 ನೇ ಸಾಲಿನ ತಂಬಾಕು ಬೆಳೆಯ ಪರವಾನಗಿಯನ್ನು ನವೀಕರಿಸುವ ಶುಲ್ಕ ಕಡಿಮೆ ಮಾಡಿ ತಂಬಾಕು ಮಂಡಳಿ ಆದೇಶ ಹೊರಡಿಸಲಾಗಿದೆ.
ತಂಬಾಕು ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದಾರೆ. ತಂಬಾಕು ಮಳೆಯಾಶ್ರಿತ ಬೆಳೆಯಾಗಿದ್ದು, ರೈತರು ಎಲ್ಲಾ ರೀತಿಯ ಹವಾಮಾನ ವೈಪರಿತ್ಯಗಳನ್ನು ಎದುರಿಸಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ತಂಬಾಕು ಮಳೆಯಾಶ್ರಿತ ಬೆಳೆಯಾಗಿರುವ ಕಾರಣ ಹವಾಮಾನಕ್ಕೆ ಅನುಗುಣವಾಗಿ ಬೆಳೆಯ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ನಿಖರವಾಗಿ ಅಂದಾಜಿಸಲು ಸಾಧ್ಯವಾಗುವುದಿಲ್ಲ. ತಂಬಾಕು ಮಂಡಳಿಯಲ್ಲಿ ನಿಗದಿತ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ ಮಾರಾಟ ಮಾಡಿದ ರೈತರ ಪರವಾನಗಿಯನ್ನು ನವೀಕರಿಸಲು 2022- 23 ನೇ ಬೆಳೆ ಸಾಲಿನಲ್ಲಿ ಹೆಚ್ಚಿನ ದಂಡವನ್ನು ವಸೂಲಿ ಮಾಡುತ್ತಿದ್ದರು. ಕಳೆದ ವರುಷ ಹವಾಮಾನದ ವೈಪರೀತ್ಯದಿಂದ ಇಳುವರಿಯಲ್ಲಿ ವ್ಯತ್ಯಾಸದಿಂದ 68 M. Kg ತಂಬಾಕು ಬೆಳೆಯಲು ಸಾಧ್ಯವಾಯಿತು. 2022- 23 ನೇ ಬೆಳೆ ಸಾಲಿಗೆ ಅಧಿಕೃತ ಖೋಟಾ ವನ್ನು 100 M kgs ನಿಗದಿಪಡಿಸಿ ಹೆಚ್ಚಿನ ಬೆಳೆ ಬೆಳೆಯಲು ಉತ್ತೇಜನ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಶ್ರೀ ಬಿ.ವಿ ಆರ್ ಸುಬ್ರಮಣ್ಯಂ, ತಂಬಾಕು ಮಂಡಳಿ ಅಧ್ಯಕ್ಷರು ಹಾಗೂ ತಂಬಾಕು ಮಂಡಳಿ ಇ.ಡಿ ಅವರೊಂದಿಗೆ ಮಾತನಾಡಿ ಈಗ ವಿಧಿಸುತ್ತಿರುವ ದಂಡ ಅಂದರೆ, ನಿಗದಿ ಪಡಿಸಿದ ಪ್ರಮಾಣದಲ್ಲಿ ಶೇ.25ಗಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ 5000 ರೂ., ಶೇ.50 ಗಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ 3000 ರೂ. ದಂಡವನ್ನು ಇಳಿಸಬೇಕೆಂದು ಮನವಿ ಮಾಡಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತಿ ಬ್ಯಾರನ್ಗೆ ನಿಗದಿತ ಖೋಟಾದ ಶೇ.25 ಗಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ 2500 ರೂ., ಶೇ.50 ಗಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ 1500 ರೂ. ದಂಡದ ಶುಲ್ಕವನ್ನು ಕಡಿಮೆ ಮಾಡಿ ಆದೇಶವನ್ನು ಹೊರಡಿಸಿದ್ದು, . ಎಲ್ಲಾ ರೈತರು ಆದಷ್ಟು ಬೇಗ ತಂಬಾಕು ಮಂಡಳಿ ಯಲ್ಲಿ ಪರವಾನಗಿ ಯನ್ನು ನವಿಕರಿಸಿ ಕೊಳ್ಳಬೇಕೆಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಹಿಂದಿನ ಲೇಖನಪ್ರಕೃತಿ ವಿಕೋಪದ ಹಾನಿ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ:  ಜಿಲ್ಲಾಧಿಕಾರಿ
ಮುಂದಿನ ಲೇಖನಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್, ಬ್ಯಾನರ್ ಗಳಿಗೆ ನಿರ್ಬಂಧ