ಮನೆ ಮನರಂಜನೆ ಜೂನ್ ನಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’ ಬಿಡುಗಡೆ

ಜೂನ್ ನಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’ ಬಿಡುಗಡೆ

0

ಚಂದನ್‌ ಶೆಟ್ಟಿ ನಾಯಕರಾಗಿ ನಟಿಸಿರುವ “ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ.

Join Our Whatsapp Group

ಸದ್ಯ “ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಮತ್ತೂಂದೆಡೆ ನಿಧಾನವಾಗಿ ಚಿತ್ರತಂಡ, ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

“ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾದ ಸ್ಪೆಷಲ್‌ ಪ್ರಮೋಶನ್‌ ಸಾಂಗ್‌ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ ಗ್ಲಾಮರಸ್‌ ಲುಕ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ ಜೂನ್‌ನಲ್ಲಿ ತೆರೆಕಾಣುತ್ತಿದೆ.

ಇನ್ನು “ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾದ ಪ್ರಮೋಶನ್‌ ಸಾಂಗ್‌ ಬಗ್ಗೆ ಮಾತನಾಡುವ ನಿರ್ದೇಶಕ ಸುಜಯ್‌ ಶಾಸ್ತ್ರಿ, “ಈಗಾಗಲೇ ನಮ್ಮ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಇದರ ನಡುವೆಯೇ ಸಿನಿಮಾದ ಪ್ರಮೋಶನ್‌ ಕೆಲಸಗಳಿಗೂ ಪ್ಲಾನ್‌ ಮಾಡಿಕೊಂಡಿದ್ದೇವೆ. ಅದರ ಮೊದಲ ಭಾಗವಾಗಿ ಈ ಪ್ರಮೋಶನ್‌ ಸಾಂಗ್‌ ರಿಲೀಸ್‌ ಆಗಿದೆ.

ನಮ್ಮ ಸಿನಿಮಾದ ನಾಯಕ ಕಂ ಮ್ಯೂಸಿಕ್‌ ಡೈರೆಕ್ಟರ್‌ ಆಗಿರುವ ಚಂದನ್‌ ಶೆಟ್ಟಿ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಚಂದನ್‌ ಶೆಟ್ಟಿ ಮತ್ತು ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ.

ಈ ಹಾಡು ಸಿನಿಮಾದಲ್ಲೂ ಇರಲಿದ್ದು, ಮೊದಲಿಗೆ ಈ ಹಾಡನ್ನು ಪ್ರಮೋಶನ್‌ ಸಾಂಗ್‌ ಆಗಿ ಬಳಸಿಕೊಳ್ಳುತ್ತಿದ್ದೇವೆ. ಈ ಹಾಡಿನಲ್ಲಿ ಚಂದನ್‌ ಶೆಟ್ಟಿ ಮತ್ತು ರಾಗಿಣಿ ದ್ವಿವೇದಿ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ತುಂಬ ಫ‌ನ್ನಿಯಾಗಿರುವಂತ ಮತ್ತು ಗ್ಲಾಮರಸ್‌ ಲುಕ್‌ನಲ್ಲಿರು ವಂಥ ಸಾಂಗ್‌ ಇದಾಗಿದೆ ಎಂದು ವಿವರಣೆ ನೀಡುತ್ತಾರೆ.

 ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿದ್ದು, ಸಿನಿಮಾದಲ್ಲಿ ಚಂದನ್‌ ಶೆಟ್ಟಿಗೆ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಜೋಡಿಯಾಗಿದ್ದಾರೆ. ಉಷಾ ಗೋವಿಂದ ರಾಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ಸುಜಯ್‌ ಶಾಸ್ತ್ರಿ ನಿರ್ದೇಶನವಿದೆ.

ಹಿಂದಿನ ಲೇಖನಸಿಎಂ ಆಗಲು ನನಗೆ ಅವಕಾಶ ಕೊಡಿ ಇಲ್ಲವೇ ನೀವೇ ಸಿಎಂ ಆಗಿ: ಖರ್ಗೆಗೆ ಡಿಕೆಶಿ ಒತ್ತಾಯ..?
ಮುಂದಿನ ಲೇಖನಲೇಡಿ ಡಾನ್’ನಿಂದ ಉದ್ಯಮಿಯ ಕಿಡ್ನ್ಯಾಪ್​’ಗೆ ಯತ್ನ: ಆರೋಪ