ಮನೆ ತಂತ್ರಜ್ಞಾನ ಜಿಯೊ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾದ ರಿಲಯನ್ಸ್

ಜಿಯೊ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾದ ರಿಲಯನ್ಸ್

0

ಬೆಂಗಳೂರು(Bengaluru): ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್, ಜಿಯೊ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.

ನೂತನ ರಿಲಯನ್ಸ್ ಜಿಯೊ 5G ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ ಡ್ರ್ಯಾಗನ್ 480 ಪ್ರೊಸೆಸರ್ ಮತ್ತು 4 GB RAM ಹಾಗೂ 32 GB ಸ್ಟೋರೇಜ್ ಇರಲಿದೆ ಎನ್ನಲಾಗಿದೆ.

ಜನಸಾಮಾನ್ಯರಿಗೆ ಕೂಡ ಕಡಿಮೆ ದರಕ್ಕೆ 5G ಸ್ಮಾರ್ಟ್‌ಫೋನ್ ಒದಗಿಸಬೇಕು ಎನ್ನುವುದು ರಿಲಯನ್ಸ್ ಉದ್ದೇಶವಾಗಿದೆ. ನೂತನ ಜಿಯೊ 5G ಸ್ಮಾರ್ಟ್‌ಫೋನ್, ಆ್ಯಂಡ್ರಾಯ್ಡ್ 12 ಓಎಸ್ ಹಾಗೂ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತದೆ ಎಂದು 91 ಮೊಬೈಲ್ಸ್ ವರದಿ ಮಾಡಿದೆ.

ಗೂಗಲ್ ಸಹಯೋಗದಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ದೇಶದಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ರಿಲಯನ್ಸ್ ₹2 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು.

ಹಿಂದಿನ ಲೇಖನಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿ ಇಲ್ಲ: ರಾಹುಲ್ ಗಾಂಧಿ
ಮುಂದಿನ ಲೇಖನಆರ್’ಬಿಐ ರೆಪೊ ದರ ಶೇ.0.50 ರಷ್ಟು ಹೆಚ್ಚಳ