ಮನೆ ವ್ಯಕ್ತಿತ್ವ ವಿಕಸನ ನೆನಪಿನ ಕಿಮ್ಮತ್ತು

ನೆನಪಿನ ಕಿಮ್ಮತ್ತು

0

ಎಲ್ಲವೂ ನೆನಪಿನಲ್ಲಿ ಉಳಿದರೆ ಬದುಕು ಬಹಳ ಈಹಿಂಸಾತ್ಮಕ ಎನಿಸಿಬಿಡುತ್ತದೆ. ಹಾಗೆಯೇ ಎಲ್ಲವೂ ಮರೆತು ಹೋದರೂ ಕೂಡ ಬದುಕು ಹಿಂಸಾತ್ಮಕವಾಗುತ್ತದೆ. ಪ್ರತಿಯೊಬ್ಬರಿಗೂ; ಅದರಲ್ಲೂ ಮುಖ್ಯವಾಗಿ ಪರೀಕ್ಷೆಯನ್ನು ಬರೆಯಲು ಇರುವವರಿಗೆ ತಮ್ಮ ನೆನಪು ಶಕ್ತಿ ಜಾಸ್ತಿಯಾಗಬೇಕೆಂಬ ಆಸೆ ಇರುತ್ತದೆ.

Join Our Whatsapp Group

ಹಾಗಾದರೆ ಚೆನ್ನಾಗಿ ನೆನಪು ಉಳಿಯಬೇಕಾದರೆ ಏನು ಮಾಡಬೇಕು?ಮೊತ್ತ ಮೊದಲನೆಯದಾಗಿ ಯಾವುದೋ ಒತ್ತಡಕ್ಕಾಗಿ ಕಲಿಯುವುದನ್ನು ಕೈ ಬಿಟ್ಟು ಕಲಿತುಕೊಳ್ಳಬೇಕೆಂಬ ಆಸ ಶಕ್ತಿಯಿಂದ ಕಲಿಯಲು ತೊಡಗಬೇಕು. ‘ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ ’;ಅಂದರೆ ಆರೋಗ್ಯ ದೇಹದಲ್ಲಿ ಯೋಗ್ಯ ಮನಸ್ಸೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ದೇಹದ ಆರೋಗ್ಯ ಮತ್ತು ಉಲ್ಲಾಸವನ್ನು  ಕಾಪಾಡಿಕೊಳ್ಳಬೇಕು. ಆ ಮೂಲಕ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಉಲ್ಲಾಸವನ್ನು ಉಳಿಸಿಕೊಳ್ಳಬೇಕು. ದೇಹ ಮತ್ತು ಮನಸುಗಳನ್ನು ಶಿಸ್ತು ಬದ್ಧವಾಗಿ ಇರಿಸಿಕೊಳ್ಳಬೇಕು. ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡು ಶಾಂತ ಚಿತ್ತವನ್ನು ಹೊಂದಿರಬೇಕು. ಏಕಾಗ್ರತೆಯನ್ನು ಸಾಧಿಸಲು ಬೇಕಾದ ವ್ಯಾಯಾಮ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡಿ ಮನಸ್ಸು ನೆನಪುಗಳು ಚೆನ್ನಾಗಿ ಉಳಿಯುವ ವೇದಿಕೆಯನ್ನಾಗಿ ಮಾಡಿಕೊಳ್ಳಬೇಕು. ನಂತರ ಕಲಿಕೆಗೆ ತೊಡಗಬೇಕು.

ಕಲಿಯುವ ವಿಷಯಗಳನ್ನು ಅರ್ಧಂಬರ್ಧ ಕಲಿಯದೆ ಅರ್ಥಪೂರ್ಣವಾಗಿ ಕಲಿಯಬೇಕು. ಮತ್ತು ಕಲಿಕೆಯ ಪ್ರತೀ ಹಂತದಲ್ಲಿಯೂ ಕಲಿತ ವಿಷಯಗಳನ್ನು ಸಪ್ತಪಡಿಸಿಕೊಳ್ಳುತ್ತಾ ಹೋಗಬೇಕು. ನಂತರ ಕಲಿತ ವಿಷಯಗಳು ನಿತ್ಯ ಜೀವನದಲ್ಲಿ ಯಾವ ರೀತಿಯಲ್ಲಿ ಬರುತ್ತವೆ ಎಂದು ಯೋಚಿಸಿ ಅನುಷ್ಠಾನಕ್ಕೆ ಬರುತ್ತವೆ  ಎಂದು ಯೋಚಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು. ಕಲಿಯುವ ವಿಷಯಗಳಲ್ಲಿ ಕರಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ಕಲಿತ ವಿಷಯಗಳ ಪುನರಾವರ್ತನೆಯನ್ನು ನಡೆಸಬೇಕು. ವಿಷಯವನ್ನು ಕಲಿಯುವಾಗ ಎಲ್ಲೆಲ್ಲಿ ಸಾಧ್ಯ ಅಲ್ಲಲ್ಲಿ ಸಂಕ್ಷಿಪ್ತ ಪದ ಗುಂಪುನ್ನು ಮಾಡಿಕೊಳ್ಳಬೇಕು. ಆದರಿಂದ ಪದವನ್ನು ನೆನಪು ಮಾಡಿಕೊಂಡ ತಕ್ಷಣ ವಿಚಾರವು ನೆನಪಿಗೆ ಬಂದುಬಿಡುತ್ತದೆ. ಕಲಿತ ವಿಚಾರಗಳನ್ನು ಟಿಪ್ಪಣಿಗಳಾಗಿ ಬರೆದಿರಿಸಿಕೊಳ್ಳಬೇಕು. ಸಾಧ್ಯವಾಗುವ ವಿಚಾರಗಳನ್ನು ಒಂದೊಂದು ದೃಶ್ಯ ಚಿತ್ರಗಳಾಗಿ ಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಿಕೆಯ ಸಂದರ್ಭದಲ್ಲಿ ಕಾಲಿಕಾಂಶಗಳನ್ನು ಹೋಲಿಕೆ ಮತ್ತು ವ್ಯತ್ಯಾಸಗಳ ಆಧಾರದಲ್ಲಿ ತುಲನೆ ಮಾಡಿಕೊಂಡು ಕಲಿಯಬೇಕು. ಸಾಧ್ಯವಾಗುವ ಕಲಿಕಾಂಶಗಳನ್ನು ಚಟುವಟಿಕೆಗಳಿಗಾಗಿ ರೂಪಿಸಿಕೊಳ್ಳಬೇಕು. ವಿಚಾರಗಳನ್ನು ಕಲಿಯುವಾಗ ಒಳನುಸುಳಿಕೊಳ್ಳುವ ಇತರೇ ಅಂಶಗಳನ್ನು ಪ್ರತ್ಯೇಕಿಸಬೇಕು. ಈ ಎಲ್ಲವೂಗಳಿಂದ ಹೆಚ್ಚು ಚೆನ್ನಾಗಿ ನೆನೆಸಿಕೊಳ್ಳಬಹುದು.