ಬೆಂಗಳೂರು: ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪ ದರ್ಶನ್ ಮೇಲಿದೆ.
ಕೇಸ್ ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ದರ್ಶನ್ ಎ2 ಹಾಗೂ ಕೆ. ಪವನ್ ಎ3 ಆಗಿದ್ದಾನೆ. ಎಲ್ಲರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಒಟ್ಟು 13 ಜನರನ್ನು ಇಂದು (ಜೂನ್ 11) ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.
ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರ ವಿರುದ್ಧ ಅನೇಕ ಸಾಕ್ಷಿಗಳು ಸಿಗುತ್ತಿವೆ. ಕೊಲೆ ನಡೆದ ಶೆಡ್ ಗೆ ಅದೇ ರಾತ್ರಿ ದರ್ಶನ್ ಕಾರು ಬಂದಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಪ್ರಾಥಮಿಕ ತನಿಖೆ ನಡೆದಿದೆ.
ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಾಗಿದೆ.