ಮನೆ ಸುದ್ದಿ ಜಾಲ ಯಶಸ್ವಿನಿ ಯೋಜನೆ ನೋಂದಣಿ ದಿನಾಂಕವನ್ನು ಜನವರಿ 31ರವರೆಗೆ ವಿಸ್ತರಿಸಲು ಮನವಿ

ಯಶಸ್ವಿನಿ ಯೋಜನೆ ನೋಂದಣಿ ದಿನಾಂಕವನ್ನು ಜನವರಿ 31ರವರೆಗೆ ವಿಸ್ತರಿಸಲು ಮನವಿ

0

ಮೈಸೂರು(Mysuru): ಯಶಸ್ವಿನಿ ಯೋಜನೆ ನೋಂದಾವಣೆ ದಿನಾಂಕವನ್ನು 31 ಡಿಸೆಂಬರ್ 2022ರ ಬದಲಾಗಿ 2023ರಜನವರಿ 31ವರೆಗೆ ವಿಸ್ತರಣೆ ಮಾಡುವಂತೆ ಕರ್ನಾಟಕ ಸೇನಾ ಪಡೆ ಒತ್ತಾಯಿಸಿದೆ.

ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಯಶಸ್ವಿನಿ ಯೋಜನೆಯ ನೋಂದಾವಣೆ ಕೊನೆಯ ದಿನಾಂಕ  ಡಿಸೆಂಬರ್ 31 2022 ಎಂದು ಆದೇಶದಲ್ಲಿದ್ದು, ಸದರಿ ನೋಂದಣಿಗೆ ನೋಂದಾಯಿಸಲು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಕಡ್ಡಾಯವಾಗಿದೆ. ಸದರಿ ಕಾರ್ಡ್ ಪಡೆಯಲು ಆನ್ಲೈನ್ ನಲ್ಲಿ 2023ರ ಜನವರಿ 1 ರಿಂದ 12 ರವರೆಗೆ ಮಾತ್ರ ತೆರೆದಿರುತ್ತದೆ. ಆದ್ದರಿಂದ ಸದರಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಅದಕ್ಕೂ ಮುಂಚಿತವಾಗಿ ಅಂದರೆ ಡಿಸೆಂಬರ್ 31ರ ಒಳಗೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಆದ್ದರಿಂದ ದಯಮಾಡಿ ಸರ್ಕಾರ ನೋಂದಣಿ ದಿನಾಂಕವನ್ನು  2023ರ ಜನವರಿ 31ರವರೆಗೆ ವಿಸ್ತರಣೆ ಮಾಡಬೇಕೆಂದು ರಾಜ್ಯದ ಬಡ ರೈತರ ಹಾಗೂ ಖಾಸಗಿ ನೌಕರರ ಹಾಗೂ ಎಲ್ಲಾ ಕನ್ನಡಿಗರ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

2023ರ  ಜನವರಿ 1ರಿಂದಲೇ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ದೊರೆಯುವಂತೆ ತಕ್ಷಣದಿಂದಲೇ ಜಾರಿಗೊಳಿಸುವ ಮೂಲಕ ಬಡ ಹಾಗೂ ಖಾಸಗಿ ನೌಕರರ ಆರೋಗ್ಯ ಕಾಪಾಡಲು ಸಹಾಯಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ವೈ ಕೆ ನಾಗರಾಜ್, ಸಿ ಎಚ್ ಕೃಷ್ಣಯ್ಯ, ಪ್ರಭುಶಂಕರ, ಎಳನೀರು ರಾಮಣ್ಣ, ಸುಬ್ಬೇಗೌಡ, ದರ್ಶನ್ ಗೌಡ, ಪ್ರಭಾಕರ, ರವಿ ನಾಯಕ, ಕೃಷ್ಣಮೂರ್ತಿ ಇದ್ದರು.

ಹಿಂದಿನ ಲೇಖನ2022ರ ಹಿನ್ನೋಟ: ಸುಪ್ರೀಂ ಕೋರ್ಟ್’ನ ಪ್ರಮುಖ ಹತ್ತು ತೀರ್ಪುಗಳು
ಮುಂದಿನ ಲೇಖನಸಂಬಂಧದಲ್ಲಿನ ಕಹಿ ಸತ್ಯಗಳಿವು, ಪ್ರತಿಯೊಬ್ಬರೂ ಇದನ್ನು ತಿಳಿಯಲೇ ಬೇಕು