ಮನೆ ಸಾಹಿತ್ಯ ಕಾನೂನನ್ನು ಗೌರವಿಸಿ

ಕಾನೂನನ್ನು ಗೌರವಿಸಿ

0

1 923ರಲ್ಲಿ ಗಾಂಧೀಜಿಯವರು ಯರವಾಡ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆಗಿನ ಕಾಲದಲ್ಲಿ ಸಂಜೆ ನಿಗದಿತವಾದ ಸಮಯದಲ್ಲಿ ಮಾತ್ರ ಸಂದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು. ಒಂದು ದಿನ ಕಸ್ತೂರಿ ಬಾ ಗಾಂಧೀಜಿಯವರನ್ನು ಭೇಟಿ ಮಾಡಲು ಬಂದರು. ಜೈಲಿನ ಕಾನೂನಿನ ಪ್ರಕಾರ ವಾರ್ಡನ್‌ರ ಉಪಸ್ಥಿತಿಯಲ್ಲಿ ಮಾತ್ರ ಭೇಟಿಗಾರರು ಮಾತನಾಡಬಹುದಿತ್ತು. ಆದರೆ ಗಾಂಧೀಜಿ ಖ್ಯಾತ ನಾಯಕರಾದ್ದರಿಂದ ವಾರ್ಡನ್ ಅಲ್ಲಿಗೆ ಬರಲಿಲ್ಲ.

Join Our Whatsapp Group

ವಾಪಸ್ಸಾಗುವ ಸಮಯ ಬಂದಾಗ ವಾರ್ಡನ್ ಅಲ್ಲಿಗೆ ಬಂದರು. ಕಸ್ತೂರಿ ಬಾ ಮತ್ತು ಗಾಂಧೀಜಿ ಸುಮ್ಮನೆ ಮಂತ್ರ ಮೌನ ವಹಿಸಿ ನಿಂತಿದ್ದನ್ನು ನೋಡಿ ಅಚ್ಚರಿಗೊಂಡರು. ಅವರಿಬ್ಬರೂ ಏನೂ ಮಾತನಾಡದೆ ನಿಂತಿದ್ದು ತಿಳಿಯಿತು.

“ನೀವಿಬ್ಬರೇಕೆ ಸುಮ್ಮನಿದ್ದೀರಿ? ಏನಾದರೂ ತೊಂದರೆಯಿದೆಯೇ?” ಎಂದು ವಾರ್ಡನ್ ಕೇಳಿದರು.

ಪ್ರಶ್ನೆಗಳು

1. ಗಾಂಧೀಜಿಯವರ ಉತ್ತರವೇನಾಗಿತ್ತು?

2. ಈ ಕಥೆಯ ನೀತಿಯೇನು?

ಕಾನೂನನ್ನು ಗೌರವಿಸಿ

 ಉತ್ತರಗಳು

1. “ನನಗೆ ಜೈಲಿನ ಕಾನೂನು ಗೊತ್ತು. ಇತರೆ ಜೈಲುವಾಸಿಗಳಿಗಿಂತ ನಾನು ಭಿನ್ನನಲ್ಲ. ನನ್ನ ಹೆಂಡತಿಯ ಜೊತೆ ಖಾಸಗಿಯಾಗಿ ಮಾತನಾಡುವ ಇತರರಿಗಿಲ್ಲದ ಸವಲತ್ತೇಕೆ? ಸಮಾನತೆಯನ್ನು ಒಪ್ಪುವುದರಿಂದ ನನ್ನ ಅಭಿಪ್ರಾಯವನ್ನು ಅವಳೂ ಒಪ್ಪುತ್ತಾಳೆ. ನೀವಿಲ್ಲದ ಕಾರಣ ನಮಗೆ ಮಾತನಾಡಲಾಗಲಿಲ್ಲ. ಇಲ್ಲದಿದ್ದಲ್ಲಿ ನಾವು ಕಾನೂನು ಭಂಗಮಾಡಿದಂತಾಗುತ್ತದೆ” ಗಾಂಧೀಜಿ ಎಂದರು.

2. ಇಂತಹ ಗುಣದಿಂದಲೇ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆಯುತ್ತಾರೆ. ಅವರು ತಮ್ಮ ಜನಪ್ರಿಯತೆಯ ದುರುಪಯೋಗ ಮಾಡಿಕೊಳ್ಳಲಿಲ್ಲ. ಕಾನೂನನ್ನು ಸಾಮಾನ್ಯರಂತೆ ಪಾಲಿಸಿದರು. ಅವರು ಕಾನೂನುಪಾಲಕ. ಅದು ಅವರ ಮಹಾನತೆ.