ಮನೆ ಕ್ರೀಡೆ ಒಂದೇ ಓವರ್’ನಲ್ಲಿ 7 ಸಿಕ್ಸರ್ ಸಿಡಿಸಿದ ಋತುರಾಜ್ ಗಾಯಕವಾಡ್

ಒಂದೇ ಓವರ್’ನಲ್ಲಿ 7 ಸಿಕ್ಸರ್ ಸಿಡಿಸಿದ ಋತುರಾಜ್ ಗಾಯಕವಾಡ್

0

ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಪಂದ್ಯದ ಒಂದೇ ಓವರಿನಲ್ಲಿ 7 ಸಿಕ್ಸರ್ ಸಿಡಿಸುವ ಮೂಲಕ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕವಾಡ್ ಅವರು ದಾಖಲೆ ಬರೆದಿದ್ದಾರೆ.

ಈ ಓವರ್‌’ನಲ್ಲಿ ಬರೋಬ್ಬರಿ 43 ರನ್ ಹರಿದುಬಂದಿದ್ದು, 2018ರಲ್ಲಿ ಫೋರ್ಡ್ ಟ್ರೋಫಿಯ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ವಿರುದ್ಧ ನಾರ್ಥನ್ ಡಿಸ್ಟ್ರಿಕ್ಟ್ ತಂಡದ ಆಟಗಾರರಾದ ಬ್ರೆಟ್ ಹ್ಯಾಮ್ಟನ್ ಮತ್ತು ಜೋ ಕಾರ್ಟರ್ ಒಂದೇ ಓವರಿನಲ್ಲಿ ಸಿಡಿಸಿದ್ದ ರನ್‌’ಗಳನ್ನು ಸರಿದೂಗಿಸಿದೆ.

ಉತ್ತರ ಪ್ರದೇಶ ವಿರುದ್ಧ ವಿಜಯ್ ಹಜಾರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಋತುರಾಜ್, ಶಿವ ಸಿಂಗ್ ಎಸೆದ 7 ಎಸೆತಗಳಲ್ಲಿ(ಒಂದು ನೋ ಬಾಲ್) 7 ಸಿಕ್ಸರ್ ಸಿಡಿಸಿದ್ದಾರೆ.

ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್(8 ಸಿಕ್ಸರ್) ಸಿಡಿಸಿರುವ ದಾಖಲೆ ನ್ಯೂಜಿಲೆಂಡ್‌’ನ ಲೀ ಜೆರ್ಮೊನ್ ಹೆಸರಿನಲ್ಲಿದೆ.

ಶೆಲ್ ಟ್ರೋಫಿ ಸರಣಿಯಲ್ಲಿ ವೆಲ್ಲಿಂಗ್ಟನ್‌ನಲ್ಲಿ ಅವರು ಈ ದಾಖಲೆ ಬರೆದಿದ್ದರು.ಈ ಪಂದ್ಯದಲ್ಲಿ 159 ಎಸೆತಗಳನ್ನು ಎದುರಿಸಿದ ಋತುರಾಜ್ ಗಾಯಕವಾಡ್ 16 ಸಿಕ್ಸರ್ ಮತ್ತು 10 ಬೌಂಡರಿ ಸಹಿತ 220 ರನ್ ಸಿಡಿಸಿದರು.