ಮನೆ ಆರೋಗ್ಯ ಗ್ಯಾಸ್ಟ್ರಿಕ್’ಗೆ ಸಿಂಪಲ್ ಮನೆಮದ್ದುಗಳು

ಗ್ಯಾಸ್ಟ್ರಿಕ್’ಗೆ ಸಿಂಪಲ್ ಮನೆಮದ್ದುಗಳು

0

ಜನರಿಗೆ ಬಿಪಿ, ಶುಗರ್ ಹೇಗೆ ಕಾಮನ್ ಆಗಿದೆಯೋ ಅದೇ ರೀತಿ ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಕೂಡ ಜನರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಜನರು ತಮ್ಮ ಆರೋಗ್ಯದ ವಿಚಾರದಲ್ಲಿ ಎಷ್ಟೇ ಕಾಳಜಿ ವಹಿಸಿದರೂ ಕೂಡ ತೊಂದರೆ ತಪ್ಪಿದ್ದಲ್ಲ. ಗ್ಯಾಸ್ಟ್ರಿಕ್ ತೊಂದರೆಯಿಂದ ಇಂದಿನ ದಿನಗಳಲ್ಲಿ ಜನರ ಆರೋಗ್ಯ ಸ್ಥಿತಿ ಮೊದಲಿನಂತೆ ಇಲ್ಲ.

Join Our Whatsapp Group

ಏಕೆಂದರೆ ಇದಕ್ಕೆ ಹೊಂದಿಕೊಂಡಂತೆ ಸಣ್ಣ ಪುಟ್ಟ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಗ್ಯಾಸ್ಟ್ರಿಕ್ ಹೆಚ್ಚಾದಾಗ ಬೇಸಿಗೆ ದಿನಗ ಳಲ್ಲಿ ಮಜ್ಜಿಗೆ ಕುಡಿದರೆ ತುಂಬಾ ಒಳ್ಳೆಯದು. ಇದು ದೇಹವನ್ನು ತಂಪು ಮಾಡುತ್ತದೆ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ. ಇದರಂತೆ ಇನ್ನೂ ಕೆಲವು ಟಿಪ್ಸ್ಗಳನ್ನು ಇಲ್ಲಿ ಕೊಡಲಾಗಿದೆ.

ಗ್ಯಾಸ್ಟ್ರಿಕ್ ಹಾಗೂ ಕೆಲವೊಮ್ಮೆ ಆಸಿಡಿಟಿ ಕೂಡ ಹೆಚ್ಚಾದಾಗ ಈ ರೀತಿ ಆಗುತ್ತದೆ

• ಹೊಟ್ಟೆ ಉರಿ ಮತ್ತು ಹೊಟ್ಟೆ ನೋವು

• ಗಂಟಲು ನೋವು

• ಆಹಾರವನ್ನು ತಿನ್ನಲು ಸಾಧ್ಯವಾಗದೇ ಇರುವುದು

•  ಗಂಟಲಿನಲ್ಲಿ ಆಹಾರ ಸಿಕ್ಕಿಹಾಕಿಕೊಳ್ಳುವುದು

• ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬರುವುದು

• ಎದೆಯಲ್ಲಿ ಉರಿ ಮತ್ತು ನೋವು

• ಊಟ ಮಾಡಿದ ತಕ್ಷಣ ಹೊಟ್ಟೆ ಉಬ್ಬರ ಉಂಟಾಗುವುದು

• ವಾಕರಿಕೆ

• ಮಲಬದ್ಧತೆ

• ಅಜೀರ್ಣತೆ

• ಕೆಟ್ಟ ಉಸಿರಾಟ

• ಸುಸ್ತು ಮತ್ತು ಆಯಾಸ

ಗ್ಯಾಸ್ಟ್ರಿಕ್ ಹೆಚ್ಚಾದಾಗ ಏನು ಮಾಡಬೇಕು?

• ವೈದ್ಯರು ನೀಡಿದ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ನೀವಾಗಿಯೇ ಯಾವುದನ್ನು ತೆಗೆದುಕೊಳ್ಳ ಲು ಹೋಗಬೇಡಿ. ಬಹುತೇಕ ವೈದ್ಯರು ಈ ಸಂದರ್ಭ ದಲ್ಲಿ ಅಂಟಸಿಡ್ ಕೊಡುತ್ತಾರೆ.

• ಆದರೆ ದೀರ್ಘಕಾಲದವರೆಗೆ, ಈ ಸಮಸ್ಯೆಗೆ ಮಾತ್ರೆ ತೆಗೆದು ಕೊಳ್ಳುವುದರಿಂದ, ಆರೋಗ್ಯದ ಮೇಲೆ ಅಡ್ಡಪರಿಣಾಮ ಗಳು ಕಂಡು ಬರುವ ಸಾಧ್ಯತೆ ಇರುತ್ತದೆ.

ಓಮದ ಪಾನೀಯ

• ಓಮ ನೋಡಲಿಕ್ಕೆ ಸಣ್ಣಗೆ ಇದ್ದರೂ ಕೂಡ ಗ್ಯಾಸ್ಟ್ರಿಕ್ ದಂತಹ ಸಮಸ್ಯೆಯನ್ನು ದೂರ ಮಾಡುವಲ್ಲಿ ಎತ್ತಿದಕೈ ಎಂದರೆ ತಪ್ಪಾಗಲಾರದು

• ಇದಕ್ಕೆ ಪ್ರಮುಖವಾಗಿ ಇದರಲ್ಲಿ ಕಂಡುಬರುವ ಥೈಮಾಲ್ ಎಂಬ ಪೋಷ ಕಾಂಶ ಜೀರ್ಣಾಂಗಗಳಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಿಸಿ, ಜೀರ್ಣಕ್ರಿಯೆ ಪ್ರಕ್ರಿಯೆಯು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವಂತೆ ನೆರವಿಗೆ ಬರುತ್ತದೆ.ಹೀಗೆ ಮಾಡಿ: ಒಂದು ಲೋಟ, ಕುದಿಯುವ ನೀರಿಗೆ, ಒಂದು ಟೀ ಚಮಚದಷ್ಟು ಓಮದಕಾಳು ಗಳನ್ನು ಹಾಕಿ, ಎರಡು-ಮೂರು ನಿಮಿಷ ಚೆನ್ನಾಗಿ ಕುದಿಯಲು ಬಿಡಿ.

• ಆಬಳಿಕ ಈ ನೀರನ್ನು ತಣಿಸಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಯಿಂದ ಪಾರಾಗಬಹುದು. ಒಳ್ಳೆಯ ಫಲಿತಾಂಶಕ್ಕಾಗಿ ದಿನಕ್ಕೊಂದು ಲೋಟ ಈ ಪಾನೀಯ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಇಂಗು ಬೆರೆಸಿದ ನೀರು

ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಹೊಟ್ಟೆಯುಬ್ಬರಿಕೆಯಂತಹ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ, ಒಂದು ವೇಳೆ ಉಗುರು ಬೆಚ್ಚನೆಯ ನೀರು ಇಲ್ಲಾಂದ್ರೆ, ತಣ್ಣೀರೂ ಸರಿ, ಅರ್ಧ ಟೀ ಚಮಚದಷ್ಟು ಈ ನೀರಿಗೆ ಇಂಗನ್ನು ಬೆರೆಸಿ ಕುಡಿದರೆ, ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.

ನಿಂಬೆರಸ ಹಾಗೂ ಅಡುಗೆಸೋಡಾ

• ಒಂದು ಲೋಟ ನೀರಿಗೆ ಅರ್ಧ ಚಮಚ ನಿಂಬೆರಸ ಹಾಗೂ ಇಷ್ಟೇ ಪ್ರಮಾಣದಲ್ಲಿ ಅಡುಗೆಸೋಡಾ ವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಊಟದ ಬಳಿಕ ಕುಡಿದು ಬಿಡಿ.

• ಇದರಿಂದ ಜೀರ್ಣಾಂಗ ಗಳಲ್ಲಿ ಕಾರ್ಬನ್ಡೈಆಕ್ಸೈಡ್ ಅನಿಲವು ಉತ್ಪತ್ತಿಯಾಗುತ್ತದೆ ಅಲ್ಲದೆ ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳಾದ ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳು ದೂರವಾಗುತ್ತದೆ.

ಊಟ ಮಾಡುವ ವಿಧಾನ

ಒಂದೇ ಬಾರಿ ಹೆಚ್ಚಾಗಿ ಊಟ ಮಾಡುವ ಬದಲು, ಸಣ್ಣ ಪ್ರಮಾಣ ದಲ್ಲಿ ಆಗಾಗ ತಿನ್ನಿ. ದಿನಕ್ಕೆ ಐದರಿಂದ ಆರು ಬಾರಿ ಊಟ ಮಾಡಿ ದರು ಪರವಾಗಿಲ್ಲ. ಆದರೆ ಪ್ರತಿದಿನವೂ ಒಂದೇ ಸಮಯಕ್ಕೆ ಊಟ ಮಾಡುವಂತೆ ಸಮಯವನ್ನು ನಿಗದಿ ಮಾಡಿಕೊಳ್ಳಿ. ಯಾವ ಆಹಾರ ತಿನ್ನಬೇಕು ಯಾವುದನ್ನು ತಿನ್ನಬಾರದು ಎಂಬ ಬಗ್ಗೆ ಗಮನವಿರಲಿ.

ಈ ಸಂಗತಿಗಳು ನಿಮಗೆ ಗೊತ್ತಿರಲಿ

• ದೇಹದ ತೂಕ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಿ ಕೊಳ್ಳುವ ಕಡೆಗೆ ನಿಮ್ಮ ಗಮನವಿರಲಿ.

• ರಾತ್ರಿ ಮಲಗಿಕೊಳ್ಳುವಾಗ ಎತ್ತರದ ತಲೆ ದಿಂಬು ಹಾಕಿ ಕೊಳ್ಳಿ.

• ಭಾರವಾದ ಊಟ ಮಾಡಿದ ತಕ್ಷಣ ಮಲಗಬೇಡಿ. ಸ್ವಲ್ಪ ಹೊತ್ತು ವಾಕಿಂಗ್ ಮಾಡಿ ಆಮೇಲೆ ಮಲಗಿ.

• ನಿಮಗೆ ಗ್ಯಾಸ್ಟ್ರಿಕ್ ಇದೆ ಎಂದರೆ ಕಾರ್ಬೊನೇಟೆಡ್ ಪಾನೀಯಗಳನ್ನು ಅಥವಾ ಸೋಡಾ ಕುಡಿಯಬೇಡಿ. ಗ್ಯಾಸ್ಟ್ರಿಕ್ ಹೆಚ್ಚು ಮಾಡುವ ಈರುಳ್ಳಿ ಮತ್ತು ಟೊಮೆಟೊ ಕೂಡ ತಿನ್ನಬೇಡಿ.

ಧೂಮಪಾನ ಮತ್ತು ಮಧ್ಯಪಾನ ಸಹ ಗ್ಯಾಸ್ಟ್ರಿಕ್ ಹೆಚ್ಚು ಮಾಡು ತ್ತದೆ. ಹಾಗಾಗಿ ಇವುಗಳಿಂದ ದೂರ ಇರಿ. ಸಮತೋಲ ನವಾದ ಆಹಾರ ಪದ್ಧತಿಯನ್ನು ನಿಮ್ಮದಾಗಿಸಿಕೊಂಡು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಹಿಂದಿನ ಲೇಖನಮ್ಯಾಟ್ರಿಮೋನಿಯಲ್​ ಸೈಟ್’​ನಲ್ಲಿ ಪರಿಚಯವಾದ ಮಹಿಳೆ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಸಾಫ್ಟ್​​’ವೇರ್ ಇಂಜಿನಿಯರ್​
ಮುಂದಿನ ಲೇಖನಮೈಸೂರು: ಮೂರು ಪಕ್ಷಗಳ ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ರೈತರು