ಆಂಧ್ರಪ್ರದೇಶ: ರಸ್ತೆ ಅಪಘಾತದಲ್ಲಿ ಪಲ್ಟಿಯಾದ ವಾಹನದಲ್ಲಿ ಕಂತೆ ಕಂತೆ ಹಣಗಳು ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ನಲ್ಲಜರ್ಲ ಮಂಡಲದ ಅನಂತಪಲ್ಲಿಯಲ್ಲಿನಡೆದಿದೆ.
ಟಾಟಾ ಏಸ್ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗೆ ಪರಿಣಾಮ ವಾಹನದಲ್ಲಿದ್ದ ವಸ್ತುಗಳೆಲ್ಲಾ ರಸ್ತೆಗೆ ಎಸೆಯಲ್ಪಟ್ಟಿದೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ವಸ್ತುಗಳನ್ನು ಸರಿಯಾಗಿ ಜೋಡಿಸಲು ನೆರವಾಗಿದ್ದಾರೆ ಈ ವೇಳೆ ಅಲ್ಲಿದ್ದ ಕೆಲ ರಟ್ಟಿನ ಬಾಕ್ಸ್ ನಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ ಇದರಿಂದ ಗಾಬರಿಗೊಂಡ ಸ್ಥಳೀಯರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸುವ ವೇಳೆ ರಟ್ಟಿನ ಬಾಕ್ಸ್ ಒಳಗೆ ಕಂತೆ ಕಂತೆ ನೋಟುಗಳು ಕಂಡುಬಂದಿವೆ.
ಬಳಿಕ ಹಣವನ್ನು ವಶಕ್ಕೆ ಪಡೆದ ಪೊಲೀಸರು ಲೆಕ್ಕ ಹಾಕುವ ವೇಳೆ ಅದರಲ್ಲಿ ಏಳು ಕೋಟಿಗೂ ಅಧಿಕ ಮೌಲ್ಯ ಇರುವುದಾಗಿ ಕಂಡುಬಂದಿದೆ.
ಅಪಘಾತದ ವೇಳೆ ವಾಹನ ಚಾಲಕ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚುನಾವಣೆ ಹೊತ್ತಿನಲ್ಲಿ ಹಣದ ವ್ಯವಹಾರಗಳು ಸಾಕಷ್ಟು ನಡೆಯುತ್ತಿದ್ದು ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ ಆದರೂ ಕೆಲವು ಕಡೆಗಳಲ್ಲಿ ಪೋಲೀಸರ ಕಣ್ ತಪ್ಪಿಸಿ ಹಣಗಳನ್ನು ಬೇರೆಡೆಗೆ ಸಾಗಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ.