ಮನೆ ಮನರಂಜನೆ ಲಂಡನ್‌ ನಿಂದ ಹಿಂತಿರುಗಿದ “ಲವ್‌ ಲೀ’ ಚಿತ್ರತಂಡ

ಲಂಡನ್‌ ನಿಂದ ಹಿಂತಿರುಗಿದ “ಲವ್‌ ಲೀ’ ಚಿತ್ರತಂಡ

0

ವಸಿಷ್ಠ ಸಿಂಹ ನಾಯಕರಾಗಿರುವ “ಲವ್‌ ಲೀ’ ಚಿತ್ರತಂಡ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಲಂಡನ್‌ ಗೆ ತೆರಳಿತ್ತು. ಈಗ ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಪೂರೈಸಿಕೊಂಡು ವಾಪಾಸ್‌ ಆಗಿದೆ.

Join Our Whatsapp Group

ಈ ಹಿಂದೆ ಪಡುಕೆರೆಯ ಕಡಲಕಿನಾರೆಯಲ್ಲಿ ಚಿತ್ರಕ್ಕಾಗಿ ಸುಂದರವಾದ ಸೆಟ್‌ಗಳನ್ನು ನಿರ್ಮಿಸಲಾಗಿತ್ತು. “ಅಭುವನಸ ಕ್ರಿಯೇಶನ್ಸ್‌’ ಬ್ಯಾನರಿನಲ್ಲಿ ರವೀಂದ್ರ ಕುಮಾರ್‌ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಲವ್‌ ಲಿ’ ಸಿನಿಮಾಕ್ಕೆ ಯುವ ಪ್ರತಿಭೆ ಚೇತನ್‌ ಕೇಶವ್‌ ನಿರ್ದೇಶನ ಮಾಡುತ್ತಿದ್ದಾರೆ. “ಲವ್‌ ಲಿ’ ಸಿನಿಮಾದಲ್ಲಿ ನಾಯಕ ವಸಿಷ್ಠ ಸಿಂಹ ಅವರಿಗೆ ಮುಂಬೈ ಬೆಡಗಿ ಸ್ಟೆ ಪಟೇಲ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ.

“ಹೊಸಥರದ ಸಿನಿಮಾ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡು ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾವಿದು. ರೌಡಿಸಂ, ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಎಲ್ಲವೂ ಈ ಸಿನಿಮಾದ ಕಥೆಯಲ್ಲಿದೆ. ತುಂಬ ಚೆನ್ನಾಗಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಸಿನಿಮಾ ಕೂಡ “ಲವ್‌ ಲೀ’ ಆಗಿಯೇ ಬಂದಿದೆ. ಹಲವು ಭಾವನೆಗಳನ್ನು ತೋರಿಸುವಂತಹ ಅವಕಾಶ ಈ ಪಾತ್ರದಲ್ಲಿದೆ’ ಎನ್ನುವುದು ನಾಯಕ ವಸಿಷ್ಠ ಮಾತು.

ನಿರ್ದೇಶಕ ಚೇತನ್‌ ಕೇಶವ್‌ ಹೇಳುವಂತೆ, “ಲವ್‌ ಲೀ ಐದಾರು ಜಾನರ್‌ ಗಳು ಸೇರಿಕೊಂಡಿರುವ ಸಿನಿಮಾ. ವಸಿಷ್ಠ ಅವರ ಕೆರಿಯರ್‌ನಲ್ಲೇ ವಿಭಿನ್ನ ಸಿನಿಮಾವಾಗಲಿದೆ ಎಂಬ ವಿಶ್ವಾಸ ಅವರದು.

ಚಿತ್ರದಲ್ಲಿ ಅಚ್ಯುತ ಕುಮಾರ್‌, ದತ್ತಣ್ಣ, ಸಮೀಕ್ಷಾ, ಮಾಳವಿಕಾ ಮೊದಲಾದವರು “ಲವ್‌ ಲಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಿಂದಿನ ಲೇಖನರಸ್ತೆ ಅಪಘಾತ: ಪಲ್ಟಿಯಾದ ವಾಹನದಲ್ಲಿ ಕಂತೆ ಕಂತೆ ಹಣ ಪತ್ತೆ
ಮುಂದಿನ ಲೇಖನಕೊಡಕರ ದರೋಡೆ ಪ್ರಕರಣ: ಪೊಲೀಸರ ಆರೋಪಗಳನ್ನೆಲ್ಲಾ ತನಿಖೆ ಮಾಡಲಾಗದು ಎಂದು ಕೇರಳ ಹೈಕೋರ್ಟ್‌ಗೆ ತಿಳಿಸಿದ ಇ ಡಿ