ಲಾಸ್ ಏಂಜಲೀಸ್: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಖುಷಿಯಲ್ಲಿರುವ ರಾಜಮೌಳಿ ಅವರ ‘ಆರ್’ಆರ್’ಆರ್’ ತಂಡಕ್ಕೀಗ ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಡಿ ಜಗತ್ತಿನ ಪ್ರತಿಷ್ಠಿತ ವಿಮರ್ಶಕರ ಆಯ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.
28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ‘ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ವಿಮರ್ಶಕ ಪ್ರಶಸ್ತಿ ಪಡೆದಿರುವುದಕ್ಕಾಗಿ @RRRMovie ಯ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಅಭಿನಂದನೆಗಳು’ ಎಂದು ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.
‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ‘ಅರ್ಜೆಂಟೀನಾ 1985’, ‘ಬಾರ್ಡೋ’, ‘ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್’, ‘ಕ್ಲೋಸ್’ ಮತ್ತು ‘ಡಿಸಿಷನ್ ಟು ಲೀವ್’ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು.
‘ಆರ್‌ಆರ್‌ಆರ್’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರನ್ ಮೊದಲಾದವರಿದ್ದಾರೆ.
ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಾಲ್ಪನಿಕ ಸ್ನೇಹ ಮತ್ತು ಬ್ರಿಟಿಷ್ ವಿರುದ್ಧದ ಹೋರಾಟದ ಕಥೆಯಾಗಿದೆ.