ಮನೆ ದೇವಸ್ಥಾನ ಭಾರತದ ಪವಿತ್ರ ಕ್ಷೇತ್ರಗಳು : ಭಾಗ ಮೂರು

ಭಾರತದ ಪವಿತ್ರ ಕ್ಷೇತ್ರಗಳು : ಭಾಗ ಮೂರು

0

 ದಕ್ಷಿಣ ಭಾರತದ ವೈಶಿಷ್ಟ್ಯ

Join Our Whatsapp Group

   ದೇವಾಲಯಗಳ ನಿರ್ಮಾಣ. ಪ್ರತಿಮಾ ಶಿಲ್ಪ,ಆರಾಧನಾ ಕಲೆ-ಇವುಗಳಲ್ಲಿ ಆರ್ಯ ಸಂಸ್ಕೃತಿಯಲ್ಲಿ ಕಾಣದ ಕೆಲವು ವಿಶೇಷ ರೂಪಗಳನ್ನು ದ್ರಾವಿಡ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗೆ ಕಾಣಿಕೆಯಾಗಿ ಕೊಟ್ಟಿದ್ದೆ ಯೆನ್ನಬುವುದು.ನಿಗಮಳು ಉತ್ತರ ಭಾರತದಲ್ಲಿ ಜನಿಸಿದವು. ಆಗಮಗಳು ದಕ್ಷಿಣ ಭಾರತದಲ್ಲಿ ಜನಿಸಿದುವು. ಉತ್ತರ ಭಾರತದ ಸಂಸ್ಕೃತಿಗೆ ದಕ್ಷಿಣ ಭಾರತ ಸಂಸ್ಕೃತಿಯು ವೈಶಾಲ್ಯವನ್ನೂ ಪುಷ್ಟಿಯನ್ನೂ ಕೊಟ್ಟಿತು. ಇದಕ್ಕೆ ಸಂಸ್ಕೃತಿ, ಇತಿಹಾಸ, ಪುರಾಣ ಪುಣ್ಯಕತೆಗಳಲ್ಲಿ ಅನೇಕ ಉದಾಹರಣೆಗಳು ದೊರೆಯುತ್ತವೆ.

     ಶ್ರೌತ,ಗೃಹ,ಧರ್ಮ ಸೂತ್ರಗಳಲ್ಲಿ ಅನೇಕವು ನರ್ಮದಾ ಗೋದಾವರಿ ಸಮಪ್ರಾಂತ್ಯದಲ್ಲಿ ಜನ್ಮತಾಳಿದವು. ಋಕ್ ಸಂಹಿತೆಯ ಸಾಯಣಭಾಷ್ಯದ ದಕ್ಷಿಣ ಭಾರತದ ಕೊಡುಗೆ ಭಾರತ ಭಕ್ತಿ ಪದ್ಧತಿಗೆ ಭಗವಂತ ಪಂಥವುವು ದ್ರಾವಿಡರ ಕಾಣಿಕೆ.  ಉತ್ತರ.ಭಾರತದ ಭಕ್ತಿ ಪಂಥಗಳ ಮೇಲೆ ದಕ್ಷಿಣ ಭಾರತ ಭಗವತ ಸಂಪ್ರದಾಯದ ಪ್ರಭಾವಕ್ಕೆ ಒಳಗಾಗಿದ್ದರು. ವಂಗ ದೇಶದ ಚೈತನ್ಯ ಪ್ರಭು ಮತ್ತು ಶುದಾದ್ವೈತ  ಪ್ರತಿಪಾದಕರಾದ ವಲ್ಲಭಾ ಚಾರ್ಯರು  ಶ್ರೀಮದ್

 ಗವತದಲ್ಲಿಭಾತದಲ್ಲಿ

ಕಲೌಖಲು ಭವಿಷ್ಯಂತಿಯ ನಾರಾಯಣ ಪಾರಾಯಣಾಃ

ಕ್ಟಚಿತ್ವಹಾ ಭಾಗಾದ್ರವಿಡೇಷುಚ ಭೂ

. ತಾಮ್ರ ಪರ್ಣೀ ನದಯುತ್ರ ಕಖತಮಾಲಾ ಪಯಸ್ವೀನೀ

ಕಾವೇರೀ ಮಿಹಾಭಾಗ ಪ್ರತೀಬೇಚಸರಸ್ಟತೀ

     ಎಂಬುದಾಗಿ ಇರುವ ಶ್ಲೋಕದಲ್ಲಿ ಈ ನದಿಗಳಿಗೆ ಸಮೀಪವಾದ ನಾಡನ್ನು ಗ್ರಾಮೀಣ ನಡೆಧುೂ ನಾಡಿಂದು  ವರ್ಣಿಸಲಾಗಿದೆ .

     ದಕ್ಷಿಣ ಭಾರತಕ್ಕೆ  ಹೆಚ್ಚಿನ  ಕೀರ್ತಿ ತಂದಿತ್ತಿರುವುದು ಇಲ್ಲಿನ ದೇವಾಲಯಗಳೆಂದರೆ ತಪ್ಪಲ್ಲ. ಇಲ್ಲಿರುವ ಹಲವು  ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ. ಶಿಲ್ಪಕಲೆಯಲಂತೂ ದಕ್ಷಿಣ ಭಾರತವು ತನ್ನದೇ ಆದ ವೈಶಿಷ್ಟ್ಯದಿಂದ ಶೋಭಿಸುತ್ತಿದೆ. ಅಜಂತ, ಎಲ್ಲೋರ, ಐಹೊಳೆ, ಬಾದಾಮಿಗಳ ಗುಹಾಂತರ್ದೇವಾಲಯಗಳು, ಬೇಲೂರು, ಹಳೇಬೀಡು,  ದೇವಾಲಯಗಳು ಬೇಲೂರು ಹಳೇಬೀಡು ಸೋಮನಾಥಪುರದ ದೇವಾಲಯಗಳು, ಐಹೊಳೆಯ ದುರ್ಗಿಗುಡಿ, ಮಾಮಲ್ಲನಪುರದ, ಶಿಲ್ಪ, ವಿಜಯನಗರ ಹಂಪಿಯ ವಿರೂಪಾಕ್ಷ ಮತ್ತು ವಿಜಯ ವಿಠಲ ದೇವಾಲಯಗಳು,  ಕಾಂಚೀಪುರ,  ಚಿದಂಬರ, ತಂಜಾವೂರು  ಮತ್ತು ಮಧುರೆಯ ದಿವ್ಯ ದೇವಾಲಯಗಳು, ಚಿದಂಬರದ ನಟರಾಜ, ಶ್ರೀರಂಗದ ರಂಗನಾಥ,ರಾಮೇಶ್ವರದ ರಾಮಲಿಂಗ, ತಿರುಪತಿ ಶ್ರೀನಿವಾಸ,  ತಿರುವನಂಪುರದ ಅನಂತಶಯನ ಗುರುವಾಯೂರಿನ ಶ್ರೀ ಕೃಷ್ಣ ಶ್ರೀಶೈಲದ ಮಲ್ಲಿಕಾರ್ಜುನ, ನಂಜನಗೂಡಿನ ಶ್ರೀಕಂಠೇಶ್ವರ, ಮೈಸೂರಿನ ಚಾಮುಂಡೇಶ್ವರಿ, ಶ್ರೀರಂಗಪಟ್ಟಣದ ಶ್ರೀರಂಗನಾಥ,  ಬೆಂಗಳೂರಿನ ಗವಿ ಗಂಗಾಧರೇಶ್ವರ, ಒಂದೇ ಎರಡೇ ಇವುಗಳೆಲ್ಲ ದಕ್ಷಿಣ ಭಾರತದ ಸೌಂದರ್ಯ, ದೈವಭಕ್ತಿ, ಕಾಲೋಪಾಸನೆ ಹಾಗೂ ಶಿಲ್ಪ ಕಲಾ ಚಾತುರ್ಯಗಳ ಭವ್ಯ ಪ್ರತೀಕಗಳಾಗಿವೆ. ಈ ಹಿಂದೂ ದೇವಾಲಯಗಳೊಡನೆ ಜಗತ್ತಿನ ದೃಷ್ಟಿಯನ್ನು ಸೂರೆಗೊಂಡ ಬೌದ್ಧ ಗುಹಾಲಯಗಳು, ಚೈತವಿಹಾರಗಳು, ಜೈನಬಸದಿಗಳು ದಕ್ಷಿಣ ಭಾರತದಲ್ಲಿವೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ಅದ್ಭುತ ಕಲಾಕೃತಿಯೆಂದು ಜಗತ್ಪ್ರಸಿದ್ಧವಾಗಿದೆ. ಮುಗಿಲೆತ್ತರದ ಗೋಪುರಗಳು ದಕ್ಷಿಣ ಭಾರತದ ದೇವಾಲಯಗಳಲ್ಲಿ ಒಂದು ವಿಶಿಷ್ಟ್ಯ. ತಂಜಾವೂರಿನ  ಬೃಹದೇಶ್ವರ ದೇವಾಲಯದ ಬೃಹದ್ಗೋಪುರ, ಕಂಚಿ, ಮಧುರೆ,ಶ್ರೀರಂಗ,ಚಿದಂಬರ, ದೇವಾಲಯದ ಗೋಪುರಗಳು ಇದಕ್ಕೆ ಸೂಕ್ತ ಉದಾಹರಣೆಗಳಾಗಿವೆ.