ಮನೆ ರಾಜಕೀಯ ಶಾಲೆಗಳಲ್ಲಿ ಕೇಸರಿ ಶಾಲೆ- ಹಿಜಾಬ್ ಧರಿಸಲು ಅವಕಾಶವಿಲ್ಲ: ಅರಗ ಜ್ಞಾನೇಂದ್ರ

ಶಾಲೆಗಳಲ್ಲಿ ಕೇಸರಿ ಶಾಲೆ- ಹಿಜಾಬ್ ಧರಿಸಲು ಅವಕಾಶವಿಲ್ಲ: ಅರಗ ಜ್ಞಾನೇಂದ್ರ

0

ಬೆಂಗಳೂರು: ಶಾಲೆಗಳಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಹಿಜಾಬ್ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿ, ಪಾರ್ಥನೆ ಮಾಡುವುದಕ್ಕೆ ದೇವಸ್ಥಾನ, ಚರ್ಚ್, ಮಸೀದಿ ಇದೆ‌. ಆಯಾ ಶಾಲಾ ಆಡಳಿತ ಮಂಡಳಿ ಇದನ್ನು ಪಾಲಿಸಬೇಕು. ಶಾಲೆಯಲ್ಲಿ ನಾವೆಲ್ಲ ಭಾರತ ಮಾತೆಯ ಮಕ್ಕಳು ಎನ್ನೋ ಭಾವನೆ ಇರಬೇಕು‌. ಹೀಗಾಗಿ, ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಶಿಕ್ಷಣ ಮಂತ್ರಿ ಹೇಳಿದ್ದಾರೆ. ಗೊಂದಲ ಮಾಡುವ ಕೆಲ ಸಂಘಟನೆ ಮೇಲೆ ನಿಗಾ ಇಟ್ಟಿದ್ದೇವೆ ಎಂದರು.

ಶಾಲೆಗೆ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ವಿದ್ಯಾರ್ಥಿಗಳು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಬೇಕು. ಧರ್ಮ ಆಚರಣೆಗೆ ಪೂಜೆ ಪುನಸ್ಕಾರಕ್ಕೆ ಚರ್ಚ್, ಮಸೀದಿ, ದೇವಸ್ಥಾನಗಳಿವೆ. ಅಲ್ಲಿ ಏನು ಮಾಡಲೂ ನಾವು ಸ್ವತಂತ್ರರು. ಹಿಜಾಬ್ ಹಿಂದೆ ಇರುವ ಮತೀಯ ಸಂಘಟನೆಗಳ ಬಗ್ಗೆ ಗಮನ ಕೊಡಲು ಪೊಲೀಸರಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ರಾಷ್ಟ್ರ ಒಗ್ಗಟ್ಟಾಗಬೇಕು ಎಂಬುದಕ್ಕೆ ಅಡ್ಡಗಾಲು ಹಾಕುವವರನ್ನು ಸರಿ ಮಾಡುವ ಕೆಲಸ ನಾವು ಮಾಡಬೇಕಾಗುತ್ತದೆ. ಯಾವುದೇ ಧರ್ಮದವರು ಅವರವರ ಧರ್ಮ ಆಚರಣೆ ಮಾಡಲು ಶಾಲೆಗೆ ಬರುವುದಲ್ಲ. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು. ಶಾಲೆ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಬಾರದು, ಹಸಿರು ಶಾಲು, ಕೇಸರಿ ಶಾಲು ಧರಿಸಬಾರದು. ಶಾಲಾ ಮ್ಯಾನೇಜ್​ಮೆಂಟ್ ಹೇಳುವ ರೀತಿ ನಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.