ಮನೆ ಮನರಂಜನೆ ಶ್ರೀನಗರ ಕಿಟ್ಟಿ ನಟನೆಯ ಗೌಳಿ ಚಿತ್ರದ ಟೀಸರ್ ರಿಲೀಸ್

ಶ್ರೀನಗರ ಕಿಟ್ಟಿ ನಟನೆಯ ಗೌಳಿ ಚಿತ್ರದ ಟೀಸರ್ ರಿಲೀಸ್

0

ಬೆಂಗಳೂರು: ನಟ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿರುವ ನಟಿಸಿರು ‘ಗೌಳಿ’ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಕಳೆದ ಕೆಲ ವರ್ಷಗಳು ವಿರಾಮ ತೆಗೆದುಕೊಂಡಿದ್ದ ಶ್ರೀನಗರ ಕಿಟ್ಟಿ ಅವರು ಗೌಳಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಪುನಃ ಪ್ರವೇಶ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪೋಟೊಗ್ರಾಫರ್ ಆಗಿದ್ದ ಸೂರಾ ಅವರು ಗೌಳಿ ಚಿತ್ರ ನಿರ್ದೇಶಿಸಿದ್ದಾರೆ. ಸೋಹಂ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿ ರಘು ಸಿಂಗಮ್ ನಿರ್ಮಿಸಿದ್ದಾರೆ. ರಂಗಾಯಣ ರಘು, ಪಾವನಾ ಗೌಡ ಮುಂತಾದವರು ತಾರಾ ಬಳಗದಲ್ಲಿದ್ದು, ಗೌಳಿ ಕುಟುಂಬವೊಂದರಲ್ಲಿ ನಡೆಯುವ ನೈಜ ಘಟನೆಯನ್ನಾಧರಿಸಿದೆ.

ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣವಿದ್ದು, ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ. ಗೌಳಿ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮಾಹಿತಿ ನೀಡಿಲ್ಲ.

ಹಿಂದಿನ ಲೇಖನಶಾಲೆಗಳಲ್ಲಿ ಕೇಸರಿ ಶಾಲೆ- ಹಿಜಾಬ್ ಧರಿಸಲು ಅವಕಾಶವಿಲ್ಲ: ಅರಗ ಜ್ಞಾನೇಂದ್ರ
ಮುಂದಿನ ಲೇಖನಸಿಡಿ ಪ್ರಕರಣ:  ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಒಪ್ಪಿಗೆ