ಮನೆ ಮನೆ ಮದ್ದು ಶ್ರೀ ಗಂಧ (SANTALUM ALBUM)

ಶ್ರೀ ಗಂಧ (SANTALUM ALBUM)

0

20-30 ಅಡಿ ಬೆಳೆಯುವ ಸದಾ ಹರಿದ್ವರ್ಣದ ಮರ. ರಾಜ್ಯದ ಎಲ್ಲೆಡೆ ಬೆಳೆಯುತ್ತದೆ. ಬೇರಿನಿಂದ ಬೇರೆ ಮರ ಗಿಡಗಳಿಂದ ಪೋಷಣೆ ಪಡೆವ ಪರೋಪ ಜೀವಿಯಾಗಿದೆ. ಅಂಡಾಕಾರದ ಎಲೆ ಹಸಿರು, ಹಳದಿ ಕೆಂಪು ಹೂ, ಮಾಂಸಲ ಹೂ, ಮತ್ತು ದುಂಡನೆ ನೀಲಿ ಗಪ್ಪು ಕಾಯಿ. ಒಳಗೆ ಗುಂಡೇ ಬೀಜ.

ಬೀಜದಿಂದ ಹೊಸ ಸಸಿ ಹಕ್ಕಿ, ಪ್ರಾಣಿಗಳಿಂದ ಬೀಜ ಪ್ರಸಾರ. ಇತ್ತೀಚೆಗೆ ಗಂಧಕೃಷಿ ಆರಂಭವಾಗಿದೆ. ಕಾಂಡ ಬಲಿತಷ್ಟು ಒಳಗಡೆ ತಿರುಳು ಮರ ಚೇಗು ಗಟ್ಟಿ ಅದನ್ನು ಎಣ್ಣೆ ಮತ್ತು ಅಲಂಕಾರಿಕ ವಸ್ತು ಉದ್ಯಮಕ್ಕಾಗಿ ಬಳಸುತ್ತಾರೆ. ಇದೇ ಶ್ರೀಗಂಧ. ಮದ್ದಿನ ಬಳಕೆಗೆ ಸಹ ಗಟ್ಟಿ ಕಾಂಡದ ಒಳ ತಿರುಳು ಬೇಕು. ಗಂಧದೆಣ್ಣೆಗೆ ಭಾರಿ ಬೇಡಿಕೆ. ಸ್ಯಾಂಟಲಾಲ್, ಬೀಟಾ ಸ್ಯಾಂಟಲಾಲ್, ಐಸೊಮೆರಿಕ್ ಸೆಸ್ಕ್ಪಿಟ ರ್ವೀನು ಮತ್ತು ಆಲ್ಡಿ ಹೈಡುಗಳು ಶ್ರೀಗಂಧದ ರಾಸಾಯನಿಕಗಳು.

ಮದ್ದಿಗಾಗಿ ಬಾಹ್ಯ ಮತ್ತು ಸೇವನೆಗಾಗಿ ಶ್ರೀಗಂಧ ಬಳಸುತ್ತಾರೆ. ಬಹಳ ತಂಪು. ಕಹಿ ರಸವಿದ್ದರೂ ವಿಷ, ಕ್ಷಯ, ಕಫ, ಬಾಯಾರಿಕೆ, ಉರಿ ಪರಿಹಾರವಾಗುತ್ತದೆ.

ಔಷಧೀಯ ಗುಣಗಳು :-

* ಕಿವಿನೋವು, ಮೂಗು ಊರಿ, ಹಲ್ಲು ನೋವು ಬಂದಾಗ ಗಂಧದ ಎಣ್ಣೆ ಸಂಗಡ ಸಾಸಿವೆ ಎಣ್ಣೆ ಬೆರೆಸಿ ಬಿಸಿ ಮಾಡಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.

* ಎಲೆ ಚಿಗುರಲೆ ಅರೆದು ತಂಬುಳಿ ರೂಪದಲ್ಲಿ ಮಲೆನಾಡಿಗರು ಸೇವಿಸುತ್ತಾರೆ.

* ಚರ್ಮದ ಕಾಯಿಲೆಗೆ ಪರಿಹಾರ ರೂಪವಾಗಿ ಎಣ್ಣೆ, ಅರೆದ ಎಲೆ ಲೇಪನದಿಂದ  ಲಾಭವಿದೆ.  

* ಮೂತ್ರದ ಉರಿ, ಬಣ್ಣ ಬದಲಾಗುವಿಕೆ ಶ್ರೀಗಂಧ ಕೊರಡು ತೇಯ್ದು ಕುಡಿದರೆ ಮೂತ್ರ ಉರಿ ಕಡಿಮೆಯಾಗುತ್ತದೆ.

* ದೇಹದಲ್ಲಿ ಊತ, ಮೈ ಕೈ ನೀರು ಸೇರಿರುವಂತಹ ಸಂದರ್ಭದಲ್ಲೇ ಗಂಧದ ಎಣ್ಣೆಯನ್ನು 15-20 ಹನಿಯನ್ನು ಸೇವನೆ ಮಾಡಿದರೆ ದೇಹದಲ್ಲಿಯ ಊತ, ಮೈ ಕೈ ನೀರೂರುವ ಸಮಸ್ಯೆಯೂ ಕಡಿಮೆಯಾಗುತ್ತದೆ.