ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನೌಕರ : ಸ್ವಾಮಿ ಮುಂದೆ ನಿಮ್ಮನೇಲಿ ಕೆಲಸ ಮಾಡೋದಿಲ್ಲ

ರಾಜು : ನಮ್ಮನೇಲಿ ನಿನಗೇನು ಅಂತ ತೊಂದರೆಯಾಯ್ತು ?

ನೌಕರ : ನಿಮ್ಮಾಕೆ ಯಾವಾಗಲೂ ನಿಮ್ಮನ್ನು ಗದರಿಸಿದಂತೆ ನನ್ನೂ ಗದರಿಸುತ್ತಾರೆ, ಕೈ ಮಾಡ್ತಾರೆ. ನನಗೂ ನಿಮಗೂ ಸ್ವಲ್ಪನಾದರೂ ವ್ಯತ್ಯಾಸ ಬೇಡವ ?   

***

ಡಾಕ್ಟರ್ :  ರಾಜು ಸತ್ತಿರೋ ಹಾಗಿದೆ, ತೆಗೆದು ಡೆತ್ ವಾರ್ಡಿಗೆ ಹಾಕಿ.

ರಾಜು : ನರ್ಸ್ ನನ್ ಮಾತು ಕೇಳಿ. ನಾನು ಸತ್ತಿಲ್ಲ.

ನರ್ಸ್ : ಸುಮ್ನೆ ಬಿದ್ಕೊಳ್ಳಯ್ಯ, ಡಾಕ್ಟರ್ಗಿಂತ ನಿನ್ಗೇನು ಮಹಾ ಗೊತ್ತು.

***

ರಾಜು : (ಫೋನಿನಲ್ಲಿ) ಅಲ್ವೋ ಕಿಟ್ಟು, ನೀನು ಕಳುಹಿಸಿದ ನಾಯಿ ಪ್ರಯೋಜನವಿಲ್ಲ.

ಕಿಟ್ಟು :ಯಾಕೋ ಏನ್ ಮಾಡ್ತು ?

ರಾಜು : ಏನು ಮಾಡಿಲ್ಲ ಅಂತ್ಲೇ ಫೋನ್ ಮಾಡ್ತಾ ಇರೋದು. “ಯಾರೇ ಬರಲಿ, ಕಚ್ಚಿ ಬಿಸಾಕುತ್ತೆ” ಅಂತ ಹೇಳಿದ್ದೆ. ನಮ್ಮತ್ತೆ ಬಂದು 15 ದಿನ ಆಯ್ತು ಏನು ಮಾಡುತ್ತಿಲ್ಲ.