ಮನೆ ರಾಜಕೀಯ ಸೋಮವಾರ ಬಹುತೇಕ ಶಾಲೆ ಓಪನ್: ಸಚಿವ ಬಿ.ಸಿ.ನಾಗೇಶ್

ಸೋಮವಾರ ಬಹುತೇಕ ಶಾಲೆ ಓಪನ್: ಸಚಿವ ಬಿ.ಸಿ.ನಾಗೇಶ್

0

ಬೆಂಗಳೂರು: ಹಿಜಾಬ್ ಕೇಸರಿ ಶಾಲು ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಸರ್ಕಾರದಿಂದ ಮೂರು ದಿನ ರಜೆ ಘೋಷಿಸಲಾಗಿದ್ದು, ಸೋಮವಾರದಿಂದ ಬಹುತೇಕ ಶಾಲೆಗಳು ಓಪನ್ ಆಗುವ ನಿರೀಕ್ಷೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಾಳೆಗೆ ಸರ್ಕಾರ ಆದೇಶ ಮಾಡಿದ ರಜೆ ಮುಗಿಯುತ್ತೆ. ಶನಿವಾರ ಭಾನುವಾರ ಇದೆ ಅದಾದ ಬಳಿಕ ನೊಡೋಣ ಕೊರೋನಾ ಮೂರನೇ ಅಲೆಯಲ್ಲೇ  ನಾವು ಶಾಲೆ ಓಪನ್ ಮಾಡಿದ್ದೀವಿ. ಈಗ ಕಿಡಿಗೇಡಿಗಳ ಕೃತ್ಯದಿಂದ ಕಾಲೇಜು ಬಂದ್ ಮಾಡುವ ಅನಿವಾರ್ಯ ಆಗಿದೆ. ಸೋಮವಾರ ಬಹುತೇಕ ಶಾಲೆ ಓಪನ್ ಆಗಲಿದೆ ಎಂದರು.

ಮಕ್ಕಳ ಮನಸ್ಸು ಕೆಡಬಾರದು, ಮಕ್ಕಳ ನಡುವೆ ವೈಮನಸ್ಸು ಆಗಬಾರದು. ಕೋರ್ಟ್ ತೀರ್ಪು ಬರುವವವರೆಗೆ ಹಿಜಾಬ್ ಬದಿಗಿಟ್ಟು ಕಾಲೇಜು ಬನ್ನಿ. ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಆಚರಣೆಗಳ ಕೇಂದ್ರಗಳಲ್ಲ ಎಂದು ಮುಸ್ಲಿಂ ಯುವತಿಯರಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ‌ಮನವಿ ಮಾಡಿಕೊಂಡರು.

ಪರಿಸ್ಥಿತಿ ನೋಡಿಕೊಂಡು ಮಾತನಾಡಲಿ:  ಮಂತ್ರಿಯೇ ಕೇಸರಿ ಶಾಲು ಹಂಚಿದ್ದಾರೆ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಈ ವಿವಾದ ಹುಟ್ಟು ಹಾಕಿದ್ದಾರೆ ಎಂಬುದನ್ನು ಗಮನಿಸಿ ಡಿಕೆ ಶಿವಕುಮಾರ್ ಹೇಳಿಕೆ ನೀಡಲಿ. ಸರ್ಕಾರ ಕಾನೂನು ಮೀರಿ ಏನೂ ಮಾಡಿಲ್ಲ. ಸದ್ಯದ ವ್ಯವಸ್ಥೆ ನೋಡಿ ಡಿಕೆ ಶಿವಕುಮಾರ್ ಮಾತನಾಡಲಿ ಎಂದು ಆಕ್ರೋಶ ಹೊರ ಹಾಕಿದರು.

ಇನ್ನು ಮುಂದೆ ಯಾರು ಏನು ಹೇಳಿಕೆ ಕೊಡದಂತೆ ಮನವಿ ಮಾಡ್ತೇನೆ. ನಾವು ಜವಬ್ದಾರಿಯುತ ಸ್ಥಾನದಲ್ಲಿ ಇರುವಂತವರು. ಯಾರೇ ಆದರೂ ಸರಿ, ಇಲ್ಲಿವರೆಗೂ ಮಾತಾಡಿದ್ದು ಸಾಕು. ಇನ್ನು ಮೇಲೆ ಆದರೂ ಆ ರೀತಿ ಮಾತಾಡೋದನ್ನು ನಿಲ್ಲಿಸಿ ಎಂದು ಹೇಳಿದರು.

ಇಂದು ಸಂಜೆ ಸಭೆ: ಶಾಲಾ ಕಾಲೇಜು ಕುರಿತಾಗಿ ಸಂಜೆ ಶಿಕ್ಷಣ ಸಚಿವ ಮತ್ತು ಗೃಹ ಸವಿವರ ಜೊತೆ ಸಭೆ ನಡೆಸಲಾಗುತ್ತದೆ. ಇಲ್ಲಿ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು. ಹೊರಗಡೆಯ ಸಂಘಟನೆಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕೋರ್ಟ್ ಆದೇಶವನ್ನ ಎಲ್ಲರೂ ಕಾಯಬೇಕು ಎಂದು ಹೇಳಿದರು.

ಹಿಂದಿನ ಲೇಖನಈಗಲ್ ಟನ್ ವಿಲ್ಲಾದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಬಂಧನ
ಮುಂದಿನ ಲೇಖನಹಿಜಾಬ್-ಕೇಸರಿ ಶಾಲು ವಿವಾದ: ಯಾವುದೇ ಹೇಳಿಕೆ ನೀಡದಂತೆ ಸ್ವಪಕ್ಷದವರಿಗೆ ಸಿಎಂ ಸೂಚನೆ