ಮನೆ ಶಿಕ್ಷಣ ದ್ವಿತೀಯ ಪಿಯುಸಿ ದಾಖಲಾತಿ ಅವಧಿ ವಿಸ್ತರಣೆ

ದ್ವಿತೀಯ ಪಿಯುಸಿ ದಾಖಲಾತಿ ಅವಧಿ ವಿಸ್ತರಣೆ

0

ಬೆಂಗಳೂರು(Bengaluru): ದ್ವಿತೀಯ ಪಿಯುಸಿ ತರಗತಿಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.
ವಿಶೇಷ ದಂಡ ಶುಲ್ಕದೊಂದಿಗೆ ಸೆಕೆಂಡ್ ಪಿಯುಸಿ ತರಗತಿಗೆ ಪ್ರವೇಶ ಪಡೆಯುವ ದಾಖಲಾತಿ ದಿನಾಂಕವನ್ನು ಜುಲೈ ೨೨ವರೆಗೆ ವಿಸ್ತರಿಸಿದೆ.
೨೦೨೨-೨೩ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ ದಾಖಲಾತಿ ದಿನಾಂಕವನ್ನು ವಿಶೇಷ ದಂಡ ಶುಲ್ಕದೊಂದಿಗೆ ಜುಲೈ ೮ ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ಮನಗಂಡ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೆ ಜುಲೈ ೨೨ರವರೆಗೆ ವಿಶೇಷ ದಂಡಶುಲ್ಕದೊಂದಿಗೆ ವಿಸ್ತರಿಸಿ ಸುತ್ತೋಲೆಯನ್ನು ಹೊರಡಿಸಿದೆ.
ವಾರ್ಷಿಕವಾಗಿ ಕನಿಷ್ಠ ೭೫ % ಹಾಜರಾತಿಯ ಅವಶ್ಯಕತೆ ಇರುವುದರಿಂದ ಈ ದಿನಾಂಕವನ್ನು ಮುಂದೆ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿದೆ.

ಹಿಂದಿನ ಲೇಖನ“ಬೀಳ್ಕೊಡುಗೆ”- ಕವನ
ಮುಂದಿನ ಲೇಖನದೇಶದ್ಯಾಂತ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ