ಮನೆ ರಾಜಕೀಯ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಂಎಲ್ಸಿ ಹೆಚ್.ವಿಶ್ವನಾಥ್

ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಂಎಲ್ಸಿ ಹೆಚ್.ವಿಶ್ವನಾಥ್

0

ಮೈಸೂರು: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ, ಕಾಂಗ್ರೆಸ್ ಮುಗಿಸಿಯೇ ಅವರು ಹೋಗುವುದು ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು. ಅಹಿಂದದವರನ್ನು ಉಪಯೋಗಿಸಿಕೊಂಡು ಸಿದ್ದರಾಮಯ್ಯ ದಡಕ್ಕೆ ಬಂದರು. ಸಿದ್ದರಾಮಯ್ಯ ಕುರುಬರನ್ನು ಬೆಳೆಸಲಿಲ್ಲ ಎಲ್ಲರನ್ನು ಮುಗಿಸಿದರು ಎಂದು ಆರೋಪಿಸಿದ ವಿಶ್ವನಾಥ್, ಈಗ ಕುರುಬರ ಕ್ಷೇತ್ರಗಳಿಗೆ ಬೇರೆಯವರನ್ನು ಕರೆ ತರುತ್ತಿದ್ದಾರೆ. ಸಿದ್ದರಾಮಯ್ಯ ಯಾರನ್ನು ಬೆಳೆಯಲು ಬಿಡಲಿಲ್ಲಅವರಿಗಿಂತ ಬಿಳಿ ಬಟ್ಟೆ ಬೇರೆ ಯಾರು ಹಾಕುವಂತಿಲ್ಲ ಎಂದರು.

ನನ್ನನ್ನು ಮುಗಸಿದಿರಿ ಹೆಚ್ ಎಂ ರೇವಣ್ಣನನ್ನು ಮುಗಿಸಿದಿರಿ. ಖರ್ಗೆ ಎಲ್ಲಿ ? ಪರಮೇಶ್ವರ್ ಎಲ್ಲಿ ? ರೋಷನ್ ಬೇಗ್ ಎಲ್ಲಿ ? ಇವರೆಲ್ಲರನ್ನೂ ಮುಗಿಸಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ತತ್ವ ಸಿದ್ದಾಂತ ಬೇರೆ ಸಿದ್ದರಾಮಯ್ಯ ಸಿದ್ದಾಂತ  ಬೇರೆ ಎಂದು ಹೇಳಿದರು.

ಪರಿಷತ್ ಉಪನಾಯಕ ಖಾದರ್‌ಗೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಅದರಿಂದ ಏನು ಪ್ರಯೋಜನವಿಲ್ಲ. ಉಪನಾಯಕನದ್ದು ಏನು ಕೆಲಸ ಇಲ್ಲ. ಯಾವ ಸೌಲಭ್ಯವೂ ಇಲ್ಲ. ಇಬ್ರಾಹಿಂ ಚೆನ್ನಾಗಿ ಹೇಳಿದ್ದಾರೆ. ಹುಲಿ ಶಿಕಾರಿಗೆ ಹುಲಿಯನ್ನೇ ಕಟ್ಟಬೇಕು ಕುರಿಯನ್ನು ಅಲ್ಲ. ಕಾಂಗ್ರೆಸ್‌ನ ಹಳ್ಳ ಹಿಡಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು.

ವಿಜಯಶಂಕರ್,  ವಿಶ್ವನಾಥ್ ಕರೆದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ. ಕುರುಬರ ಕಾರ್ಯಕ್ರಮಕ್ಕೆ ಕರೆಯದಂತೆ ಹುಣಸೂರು ಕುರುಬರಿಗೆ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಇಂತಹ ಮನಸ್ಥಿತಿಯವರು ಸಿದ್ದರಾಮಯ್ಯ ಎಂದು ಆರೋಪಿಸಿದರು.

ಸಿದ್ದರಾಮಯ್ಯಗೆ  ಸ್ಪರ್ಧೆಗೆ ಬೇರೆ  ಕ್ಷೇತ್ರಕ್ಕೆ ಕರೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನೀವೊಬ್ಬರೆ ಗಂಡಸು ? ಯಾಕೆ ಆ ಕ್ಷೇತ್ರದಲ್ಲಿ ಯಾರು ಗಂಡಸರು ಇಲ್ಲವಾ ? ನಿಮ್ಮನ್ನು ಯಾರು ಪ್ರಮುಖ ನಾಯಕರು ಕರೆಯುತ್ತಿದ್ದಾರೆ ?ಯಾರೋ ಕೆಲವು ಚಮಚಾಗಳು ಕರೆಯುತ್ತಿದ್ದಾರೆ ಅಷ್ಟೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಶಾಸಕರು ಕ್ಷೇತ್ರದ ಮಾಲೀಕರಲ್ಲ ಸೇವಕರು:

ನಮ್ಮ ಕ್ಷೇತ್ರದ ರಸ್ತೆ ಹಾಳಾಗಲು ಬಿಡುವುದಿಲ್ಲವೆಂಬ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ಕ್ಷೇತ್ರದ ಮಾಲೀಕರಲ್ಲ ಸೇವಕರು. ನಾವು ಚುನಾವಣೆಗೆ ಹೋದಾಗ ಕೇಳುವುದು ಸೇವೆ ಮಾಡಲು ಅವಕಾಶ ಕೇಳುತ್ತೇವೆ. ಸೇವಕರು ಅನ್ನೋದನ್ನು ಮರೆಯುತ್ತಿದ್ದಾರೆ . ಎಂಪಿ, ಎಂಎಲ್ಎಗಳು ದಡ್ಡರಲ್ಲ. ಬಹುತೇಕ ಎಂ.ಎಲ್.ಎ ಮಂತ್ರಿಗಳು ರಿಯಲ್ ಎಸ್ಟೇಟ್‌ನವರೇ, ಅವರಿಗೆ ಹೆಚ್ಚಿಗೆ ಹೇಳುವುದು ಬೇಡ ಎಂದರು.

ಹಿಂದಿನ ಲೇಖನನೀರನ್ನು ಸದುಪಯೋಗಪಡಿಸಿಕೊಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ