ಮನೆ ರಾಜಕೀಯ ನನಗೆ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಕಾರಣ: ವಾಸು

ನನಗೆ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಕಾರಣ: ವಾಸು

0

ಮೈಸೂರು: ನನಗೆ ಟಿಕೆಟ್ ಕೈ ತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಕಿಡಿಕಾರಿದ್ದಾರೆ.

Join Our Whatsapp Group

ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜಾತಿ ರಾಜಕಾರಣವನ್ನ ನಾನು ವಿರೋಧಿಸಿದೆ. ಸಂಪೂರ್ಣ 5 ವರ್ಷ ಅಧಿಕಾರ ನಡಸಿದ ಕಾಂಗ್ರೆಸ್ 2018 ರಲ್ಲಿ ಸೋಲು ಕಂಡಿತು. ಇದಕ್ಕೆ ಜಾತಿ ರಾಜಕಾರಣ ಕಾರಣವಾಗಿದೆ ಎಂದು ಹರಿಹಾಯ್ದರು.

2018ರಲ್ಲಿ ನನ್ನ ಸೋಲಿಸಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಕಡೆ ಇದ್ದವರೆಲ್ಲ ನನ್ನ ವಿರುದ್ಧ ಕೆಲಸ ಮಾಡಿದರು. ಆದರೆ ಪಕ್ಷದಲ್ಲಿ ಇದಕ್ಕೆ ಯಾವುದೇ ಕ್ರಮ ಆಗಲಿಲ್ಲ. ಆದರೆ ಎನ್ ಆರ್. ಕ್ಷೇತ್ರದಲ್ಲಿ ಸತ್ಯ ಮಾತನಾಡಿದ ಶಾಹಿದ್ ನನ್ನ ತೆಗೆದು ಹಾಕಿದ್ರು. ಹುಲಿ ಬಾಯಿಗೆ ಮಗು ಸಿಕ್ಕ ಹಾಕಿಕೊಂಡಿದೆ. ಜೋಪಾನವಾಗಿ ಮಗುವನ್ನು ಬಿಡಿಸಿಕೊಳ್ಳಬೇಕು ಎಂದ ವಾಸು ಸಿದ್ದರಾಮಯ್ಯ ಅವರನ್ನ ಹುಲಿಗೆ, ಪಕ್ಷವನ್ನ ಮಗುವಿಗೆ ಹೋಲಿಸಿದರು.

ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದಲ್ಲೂ ಜೀತದಾಳು ಪದ್ದತಿ ಇದೆ. ನೀನು ಮಾಡಿದ್ದೇ ಸರಿ ಅಣ್ಣ, ನಿನ್ನ ಕುದುರೆ ಓಡುತ್ತೆ ಅಣ್ಣ ಅಂತಾರೆ. ಕೆಲವರಿಗೆ ಗೆಲ್ಲಿಸುವ ಶಕ್ತಿ ಇರುತ್ತೆ. ಅವರ ಬಗ್ಗೆ ಪಕ್ಷದಲ್ಲಿ ಗೌರವ ಇರುತ್ತೆ. ಆದರೆ ಕೆಲವರಿಗೆ ಸೋಲಿಸುವ ಶಕ್ತಿ ಇರುತ್ತೆ. ಅಂಥವರನ್ನು ಕಂಡರೆ ಪಕ್ಷಗಳಿಗೆ ಭಯ. ಯಾರ ವೈಯುಕ್ತಿಕ ಹಠನೋ, ಚಟನೋ ಗೊತ್ತಿಲ್ಲ. ನನಗೆ ಟಿಕೆಟ್ ಮಿಸ್ ಆಗಿದೆ. ನನ್ನ ಹೆಸರನ್ನು ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಸೂಚಿಸಿದ್ದಕ್ಕೆ ಧನ್ಯವಾದ ಎಂದರು.

45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ರೆ ನಾನು ನಿವೃತ್ತಿಗೆ ರೆಡಿ, ದಂಡ ಕಟ್ಟಲು ಸಿದ್ಧ. ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿಯಾಗಲಿ ಸಾರ್ವಜನಿಕ, ಸರ್ಕಾರದ ಆಸ್ತಿಯನ್ನು ಕಬಳಿಸಿಲ್ಲ, ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ತಪ್ಪಿಸಿದವರಿಗೆ ದೇವರು ಸನ್ಮಾರ್ಗ ಕೊಡಲಿ ಎಂದು ಅಸಮಾಧಾನಗೊಂಡಿದ್ದಾರೆ.

ನನಗೆ ಈವರೆಗೆ ಅವಕಾಶ ಕೊಟ್ಟ ಪಕ್ಷವನ್ನು ನಾನೂ ದೂರೋದಿಲ್ಲ. ನನಗೆ ಬಹಳ ಒತ್ತಡವಿದೆ. ನಮ್ಮ ಪಕ್ಷಕ್ಕೆ ಬನ್ನಿ ಅಂತ ಹಲವರು ಕರೆಯುತ್ತಿದ್ದಾರೆ. ಎರಡು ದಿನಗಳಲ್ಲಿ ಈ ಕುರಿತು ತಿರ್ಮಾನ ಮಾಡುತ್ತೇನೆ, ಪಕ್ಷ ಬಿಡೋದರಿಂದ ಪಕ್ಷದಲ್ಲಿ ನನಗೆ ಬೆಂಬಲ ನೀಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಾನು ಪಕ್ಷ ಬಿಡೋದಿಲ್ಲ. ಪಕ್ಷದಲ್ಲಿ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವರನ್ನು ಖಂಡಿಸೋದು ದ್ವೇಷಿಸೋದು ನಿಜ. ಸೀಟ್ ತಪ್ಪಿಸೋದ್ರಿಂದ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದರು.

ಹಿಂದಿನ ಲೇಖನಬೇಸಿಗೆಯಲ್ಲಿ ನಿಂಬೆ ಪಾನೀಯ ಕುಡಿದು ಉತ್ತಮ ದೃಷ್ಟಿಯನ್ನು ಪಡೆಯಿರಿ
ಮುಂದಿನ ಲೇಖನ10 ಭಾಷೆಗಳಲ್ಲಿ ಬರಲಿದೆ ಸೂರ್ಯ ಹೊಸ ಸಿನಿಮಾ ‘ಕಂಗುವ’