ಮನೆ ಅಂತರಾಷ್ಟ್ರೀಯ ಗೊಟಬಯ ರಾಜಪಕ್ಸ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್‌

ಗೊಟಬಯ ರಾಜಪಕ್ಸ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್‌

0

ಕೊಲಂಬೊ (Colombo): ಗೊಟಬಯ ರಾಜಪಕ್ಸ ಅವರ ರಾಜೀನಾಮೆಯನ್ನು ಸ್ಪೀಕರ್‌ ಸ್ವೀಕರಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸ್ವೀಕರಿಸಿರುವುದನ್ನು ಶ್ರೀಲಂಕಾ ಸಂಸತ್ತಿನ ಸ್ವೀಕರ್‌ ಕಚೇರಿ ದೃಢಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸ್ಪೀಕರ್‌ ಕಚೇರಿ ಶ್ರೀಲಂಕಾದಲ್ಲಿರುವ ಸಿಂಗಾಪುರ ರಾಯಭಾರ ಕಚೇರಿಯ ಮೂಲಕ ಅಧ್ಯಕ್ಷ ರಾಜಪಕ್ಸ ಅವರ ರಾಜೀನಾಮೆ ಪತ್ರವನ್ನು ಸ್ಪೀಕರ್ ಸ್ವೀಕರಿಸಿದ್ದಾರೆ. ಪತ್ರದಲ್ಲಿನ ಮಾಹಿತಿಯನ್ನು ಮರುಪರಿಶೀಲಿಸಲಾಗುವುದು. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ನಾಳೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದ ರಾಜಪಕ್ಸ ಶ್ರೀಲಂಕಾದಿಂದ ಪರಾರಿಯಾಗಿ ಮಾಲ್ಡೀವ್‌ನಲ್ಲಿ ತಂಗಿದ್ದರು. ಮಾಲ್ಡೀವ್‌ನಲ್ಲಿಯೂ ಪ್ರತಿಭಟನೆಯನ್ನು ಎದುರಿಸಿದ ಅವರು ಈಗ ಸಿಂಗಾಪುರಕ್ಕೆ ಹಾರಿದ್ದಾರೆ.

ಹಿಂದಿನ ಲೇಖನಶ್ರೀ ಸಪ್ತಶ್ಲೋಕೀ ದುರ್ಗಾ ಸ್ತೋತ್ರ
ಮುಂದಿನ ಲೇಖನಕೊಲೆಸ್ಟ್ರಾಲ್‌ ಕಡಿಮೆ ಮಾಡುವ ವ್ಯಾಯಾಮಾಗಳು