ರೋಹಿಣಿ,ಮೃಗಶಿರ, ಉತ್ತರ,ಹಸ್ತ, ಸ್ವಾತಿ, ಅನುರಾಧ,ಉತ್ತರಾಷಾಡ, ಶ್ರಾವಣ,ಧನಿಷ್ಠಾ, ಶತತಾರ,ಉತ್ತರಾಭಾದ್ರಪದ ಈ 11 ನಕ್ಷತ್ರಗಳು ಗರ್ಭಾದಾನಕ್ಕೆಯೋಗ್ಯವಾದ ನಕ್ಷತ್ರಗಳು. ಪುನರ್ವಸು,ಪುಷ್ಯ, ಚಿತ್ತ ಇವು ಸಾಧಾರಣ ಶುಭಕರ ನಕ್ಷತ್ರಗಳು, ಸೋಮ, ಬುಧ, ಗುರು, ಶುಕ್ರವಾರಗಳು ಶುಭಕರ.
ಮಾನ್ಯ ಮಹೋದಯರೇ ಗರ್ಭ ದಾನಕ್ಕೆ ಅಯೋಗ್ಯವಾದ ತಿಥಿ,ವಾರ, ನಕ್ಷತ್ರಾದಿಗಳ ಬಗ್ಗೆಯೂ ಚೆನ್ನಾಗಿ ಲಕ್ಷ ಕೊಡಬೇಕು.ಅವು ಯಾವುವೆಂದರೆ:
ಶ್ಲೋಕ :
ಗಂಡಾಂತಂ ತ್ರಿವಿಧಂ ತ್ರಜೇನ್ನಿಧನ ಜನ್ಮರ್ಕ್ಟೇಚ ಮೂಲಾಂತಕಂ |
ದಸ್ರಂ ಪೌಷ್ಣ ಮಘೋ ಪರಾಗ ದಿವಸಾನ್ ಪಾತಂ ತಥಾ ವೈಧೃತಿಂ ||
ಪಿತ್ರೋಃ ಶ್ರಾದ್ಧ ದಿನಂ ದಿವಾಚ ಪರಿಘಾದ್ಯರ್ದಂ ಸ್ವಪತ್ನೀ ಗಮೇ |
ಭಾನುತ್ವಾತ ಹತಾನಿ ಮೃತ್ಯು ಭವನಂ ಜನ್ಮರ್ಕ್ಷತಃ ಪಾಪಭಂ || ಭದ್ರಾ ಷಷ್ಟೀಪರ್ವರಿಕ್ತಾಶ್ಚ ಸಂಧ್ಯಾ *ಭೌಮಾರ್ಕಾರ್ಕೀ |
ನಾದ್ಯ ರಾತ್ರೀಶ್ಚತಸ್ರಃ ಗರ್ಭಾದಾನಂ ತ್ರ್ಯುತ್ತರೇಂದ್ವರ್ಕ||
ಮೇೖತ್ರ ಬ್ರಾಹ್ಮ ಸ್ವಾತೀ ವಿಷ್ಣು ವಸ್ವಂಬುಪೇಸತ್||
ಅರ್ಥ : ತಿಥಿಗಂಡ,ನಕ್ಷತ್ರ ಗಂಡ, ಲಗ್ನಗಂಡ ಇವುಗಳನ್ನು ಜನ್ಮ ನಕ್ಷತ್ರ, ಜನ್ಮ ನಕ್ಷತ್ರದಿಂದ 7ನೇ ನಕ್ಷತ್ರ ಅಶ್ವಿನಿ, ಭರಣಿ, ಮಘಾ ಮೂಲ, ರೇವತಿ ಮತ್ತು ಪಾಪಗ್ರಹವಿರುವ ನಕ್ಷತ್ರ ಇವೆಲ್ಲವನ್ನೂ ವೃತಿಪಾತ ವೈಧೃತಿ ಪರಿಘಾ, ಯೋಗದ ಪೂರ್ವಾರ್ಧ, ಭದ್ರಾಕರಣ ಜನ್ಮರಾಶಿ ಜನ್ಮ ಲಗ್ನಗಳಿಂದ ಅಷ್ಟಮ ರಾಶಿ, ಅಷ್ಟಮ ಲಗ್ನ ಗ್ರಹಣ ದಿನ,ಮಾತಾಪಿತೃಗಳ ಮರಣ ದಿವಸ ಇವೆಲ್ಲವನ್ನೂ ಉತ್ಪಾದಕರೊಳಗಾಗಿ ಉತ್ಪಾತ ಹತಾನಿ ಭಾನಿ ಯಾವ ನಕ್ಷತ್ರಗಳಲ್ಲಿ ಆರು ತಿಂಗಳೊಳಗಾಗಿ ಉತ್ಪಾತವಾಗಿರುವದೋ ನಕ್ಷತ್ರಗಳನ್ನು ಹಾಗೂ ಚತುರ್ಥಿ, ಷಷ್ಠಿ, ಅಷ್ಟಮಿ, ನವಮಿ, ಚತುರ್ದಶಿ, ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿ ಇವುಗಳನ್ನೂ ರವಿ ಮಂಗಳ ಶನಿವಾರಗಳನ್ನೂ, ಸ್ತ್ರೀಯಳು ಋತುವಾದಂದಿನಿಂದ ಮೊದಲಿನ ನಾಲ್ಕು ರಾತ್ರಿ 11,12ನೇ ದಿನದ ರಾತ್ರಿ ಇದನ್ನು ಅವಶ್ಯವಾಗಿ ಬಿಡಬೇಕು. ಈ ಪ್ರಕರಣವು ತನ್ಮಂಥ ಪ್ರತಿವ್ಯಕ್ತಿಯನ್ನು ಸೃಷ್ಟಿಸುವ ಹುಟ್ಟಿಸುವ ಸಂಸ್ಕಾರ ವಿರುದರಿಂದ ಗರ್ಭಾದಾನ ಸಂಸ್ಕಾರದ ಬಗ್ಗೆ ಬಹಳ ಎಚ್ಚರಿಕಯುಳ್ಳವರಾಗಿರಬೇಕು.ಈ ಬಗ್ಗೆ ಅಗತ್ಯ ವಿಚಾರ ಮಾಡದಿದ್ದರೆ, ಯದ್ವಾ ತದ್ವಾ ಉಲ್ಟಾ ಪಲ್ಟಾ ಸಂತಾನೋತ್ಪತ್ತಿಯಾಗುವದು ಸಹಜವಾಗಿದೆ.