ಮನೆ ಕ್ರೀಡೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಸೆಮಿಫೈನಲ್​ ಗೆ ಎಂಟ್ರಿಕೊಟ್ಟ ಭಾರತ..!

ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಸೆಮಿಫೈನಲ್​ ಗೆ ಎಂಟ್ರಿಕೊಟ್ಟ ಭಾರತ..!

0

12 ವರ್ಷಗಳ ನಂತರ ಚೆನ್ನೈನಲ್ಲಿ ನಡೆಯುತ್ತಿರುವ ಸ್ಕ್ವಾಷ್ ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ಚೀನಾ ತಂಡವನ್ನು ಮಣಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 4-0 ಅಂತರದಿಂದ ಸುಲಭವಾಗಿ ಮಣಿಸಿತು.

Join Our Whatsapp Group

ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಭಾರತ ಬಿ ಪೂಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಜಪಾನ್ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತದ ತನ್ವಿ ಖನ್ನಾ, ಸೌರವ್ ಘೋಸಲ್, ಜೋಷ್ನಾ ಚಿನಪ್ಪ ಮತ್ತು ಅಭಯ್ ಸಿಂಗ್ ಆಯಾ ಎದುರಾಳಿಗಳ ವಿರುದ್ಧ ಆರಾಮದಾಯಕ ವಿಜಯವನ್ನು ದಾಖಲಿಸಿದರು. ಇದರೊಂದಿಗೆ ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಳ್ಳುವುದು ಭಾರತದ ಗುರಿಯಾಗಿದೆ.

ಪಂದ್ಯ ಹೀಗಿತ್ತು

ಮೊದಲ ಪಂದ್ಯದಲ್ಲಿ ತನ್ವಿ ಖನ್ನಾ 7-4, 7-2, 3-7, 7-2 ಸೆಟ್‌ಗಳಿಂದ ಹೇಲಿ ವಾರ್ಡ್‌ರನ್ನು ಸೋಲಿಸಿದರು. ತನ್ವಿ ಒಂದೇ ಒಂದು ಪಂದ್ಯದಲ್ಲಿ ಸೋತಿದ್ದರಿಂದ ಪಂದ್ಯ ಬಹುತೇಕ ಏಕಪಕ್ಷೀಯವಾಗಿತ್ತು. ಎರಡನೇ ಪಂದ್ಯದಲ್ಲಿ ಸೌರವ್ ಘೋಸಾಲ್ ಅವರು ಡೆವಾಲ್ಡ್ ವ್ಯಾನ್ ನಿಕೆರ್ಕ್ ಅವರನ್ನು 7-6, 7-4, 7-1 ಸೆಟ್‌ ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಭಾರತದ ಪರ ಸ್ಕೋರ್‌ ಲೈನ್ 2-0ಗೆ ಏರಿಕೆಯಾಯಿತು.

ಟೈನ ಮೂರನೇ ಪಂದ್ಯದಲ್ಲಿ ಜೋಶ್ನಾ ಚಿನಪ್ಪ 7-4, 7-3, 3-7, 7-1 ರಲ್ಲಿ ಲಿಜೆಲ್ ಮುಲ್ಲರ್ ಅವರನ್ನು ಸೋಲಿಸಿದರು. ಹೀಗಾಗಿ ಟೈನಲ್ಲಿ ಭಾರತ 3-0 ಅಂತರದ ಮುನ್ನಡೆ ಸಾಧಿಸಿತ್ತು. ಕೊನೆಯದಾಗಿ ಅಭಯ್ ಸಿಂಗ್ 7-4, 3-7, 7-6, 7-5 ಸೆಟ್‌ ಗಳಿಂದ ಜೀನ್-ಪಿಯರ್ ಬ್ರಿಟ್ಸ್‌ರನ್ನು ಸೋಲಿಸುವುದರೊಂದಿಗೆ ಭಾರತದ ಮುನ್ನಡೆಯನ್ನು 4-0 ಅಂತರಕ್ಕೇರಿಸಿದರು.

ಎರಡು ಹಂತಗಳಲ್ಲಿ ಸ್ಕ್ವಾಷ್ ವಿಶ್ವಕಪ್

ಸ್ಕ್ವಾಷ್ ಚಾಂಪಿಯನ್‌ ಶಿಪ್ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲನೆಯದು ಗುಂಪು ಹಂತವಾಗಿದ್ದರೆ, ಎರಡನೆಯದು ನಾಕೌಟ್ ಹಂತವಾಗಿದೆ. ಗುಂಪು ಹಂತಕ್ಕಾಗಿ ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಪೂಲ್‌ಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಈಜಿಪ್ಟ್, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಕೊಲಂಬಿಯಾ ಪೂಲ್ ಎಯಲ್ಲಿ ಸ್ಥಾನ ಪಡೆದಿದ್ದರೆ, ಭಾರತ, ಜಪಾನ್, ದಕ್ಷಿಣ ಆಫ್ರಿಕಾ ಮತ್ತು ಹಾಂಗ್ ಕಾಂಗ್ ಚೀನಾ ಪೂಲ್ ಬಿಯಲ್ಲಿ ಸ್ಥಾನ ಪಡೆದಿವೆ.

ರೌಂಡ್-ರಾಬಿನ್ ಪಂದ್ಯಗಳಲ್ಲಿ ಸ್ಪರ್ಧಿಸುತ್ತವೆ

ಗುಂಪು ಹಂತದಲ್ಲಿ, ಪ್ರತಿ ತಂಡವು ತನ್ನ ಪೂಲ್‌ನಲ್ಲಿರುವ ಇತರ ಮೂರು ತಂಡಗಳ ವಿರುದ್ಧ ರೌಂಡ್-ರಾಬಿನ್ ( ಒಂದು ತಂಡವು ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಆಡುತ್ತವೆ) ಮಾದರಿಯಲ್ಲಿ ಸ್ಪರ್ಧಿಸುತ್ತವೆ. ಪ್ರತಿ ಪೂಲ್‌ ನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಗೆ ಎಂಟ್ರಿಕೊಡುತ್ತವೆ. ಇನ್ನುಳಿದ ತಂಡಗಳು ಐದರಿಂದ ಎಂಟನೇ ಸ್ಥಾನಕ್ಕಾಗಿ ಪಂದ್ಯಗಳಲ್ಲಿ ಸ್ಪರ್ಧಿಸುತ್ತವೆ. ಪ್ಲೇ ಆಫ್ ವರ್ಗೀಕರಣಕ್ಕಾಗಿ ಈ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಒಂದು ಸ್ಕ್ವಾಷ್ ತಂಡದಲ್ಲಿ ನಾಲ್ವರು ಸದಸ್ಯರಿರುತ್ತಾರೆ. ಇದರಲ್ಲಿ ಪ್ರತಿಯೊಂದೂ ತಂಡದಲ್ಲೂ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿರುತ್ತಾರೆ. ನಾಕೌಟ್ ಸುತ್ತಿನಲ್ಲಿ ಡ್ರಾ ಕಂಡುಬಂದರೆ, ಟೈ ಸಮಯದಲ್ಲಿ ಪ್ರತಿ ತಂಡವು ಗೆದ್ದ ಅಥವಾ ಸೋತ ಪಂದ್ಯಗಳ ಸಂಖ್ಯೆಯಿಂದ ವಿಜೇತ ತಂಡವನ್ನು ನಿರ್ಧರಿಸಲಾಗುತ್ತದೆ.