ಮನೆ ಅಂತಾರಾಷ್ಟ್ರೀಯ ಶ್ರೀಲಂಕಾ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

ಶ್ರೀಲಂಕಾ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

0

ಕೊಲಂಬೊ(colombo): ಶ್ರೀಲಂಕಾದ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರಾನಿಲ್‌ ವಿಕ್ರಮಸಿಂಘೆ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಸಿಂಗಾಪುರಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯಿಂದ ಶ್ರೀಲಂಕಾದ ಅಧ್ಯಕ್ಷ ಸ್ಥಾನ ತೆರವಾಗಿತ್ತು.

225 ಸದಸ್ಯ ಬಲದ ಸಂಸತ್ತಿನಲ್ಲಿ ರಾನಿಲ್ ಅವರು 134, ಸಮೀಪದ ಪ್ರತಿಸ್ಪರ್ಧಿ ಡುಲ್ಲಾಸ್‌ ಅಲಹಪ್ಪೆರುಮ ಅವರು 82 ಮತ ಪಡೆದಿದ್ದಾರೆ. ಕಣದಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ಜನತಾ ವಿಮುಕ್ತಿ ಪೆರಮುನ ನಾಯಕ ಅನುರ ಕುಮಾರ ಡಿಸ್ಸಾನಾಯಕೆ 3 ಮತಗಳನ್ನಷ್ಟೇ ಪಡೆದಿದ್ದರು.

ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ರಾನಿಲ್‌, ನಾವಿನ್ನು ಭಿನ್ನಾಭಿಪ್ರಾಯ ಮರೆಯಬೇಕು. ದೇಶ ಸಂಕಷ್ಟದಲ್ಲಿದೆ. ಯುವಜನರು ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ. ಅಭಿವೃದ್ಧಿ ಕುರಿತು ಎಲ್ಲರ ಜೊತೆಗೆ ಚರ್ಚಿಸಲು ನಾನು ಮುಕ್ತನಿದ್ದೇನೆ ಎಂದು ಹೇಳಿದ್ದರು.

ದೇಶದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಸಂಸತ್ತಿನ ಸದಸ್ಯರು ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. 73 ವರ್ಷದ ರಾನಿಲ್‌ ಅವರು ಐದು ದಶಕಗಳ ಆಡಳಿತ ಅನುಭವ ಹೊಂದಿದ್ದು, ಆರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಲೇಖನಯುದ್ದ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ
ಮುಂದಿನ ಲೇಖನರಾಜ್ಯಸಭೆ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡಿ.ವೀರೇಂದ್ರ ಹೆಗ್ಗಡೆ