ಮನೆ Uncategorized ಸಿಎಂ ಅಸಾಮರ್ಥ್ಯ ತೋರಿಸಲು ಶ್ರೀರಾಮುಲು ಪ್ರತಿಭಟನೆಗೆ ಕುಳಿತಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ಸಿಎಂ ಅಸಾಮರ್ಥ್ಯ ತೋರಿಸಲು ಶ್ರೀರಾಮುಲು ಪ್ರತಿಭಟನೆಗೆ ಕುಳಿತಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

0

ಬೆಂಗಳೂರು(Bengaluru): ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಸಾಮರ್ಥ್ಯವನ್ನು ಎತ್ತಿ ತೋರಿಸಲು ಸಚಿವ ಶ್ರೀರಾಮುಲು ಅವರು ಬಳ್ಳಾರಿ ವೇದಾವತಿ ನದಿ ಬಳಿ ಪ್ರತಿಭಟನೆ ಕುಳಿತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಬುಧವಾರ ಇಡೀ ರಾತ್ರಿ ಕಾಲುವೆ ಬಳಿ ಕಾಲಕಳೆದ ‘ಹೈ ಡ್ರಾಮಾ’ಕ್ಕೆ ವೇದಾವತಿ (ಹಗರಿ) ನದಿ ಸಾಕ್ಷಿಯಾಯಿತು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಧಿಕಾರಿಗಳು ಸಿಎಂ ಮಾತು ಕೇಳುವುದಿಲ್ಲ, ಸಚಿವರಿಗೂ, ಸಿಎಂಗೂ ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ, ಇವರ ಧರಣಿ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ ಎಂದು ಗುಡುಗಿದೆ.

ರಾಹುಲ್‌ ಗಾಂಧಿಯವರ ‘ಭಾರತ್‌ ಜೋಡೊ ಯಾತ್ರೆ‘ ಮತ್ತು ಬಿಜೆಪಿ ‘ಜನ ಸಂಕಲ್ಪ ಯಾತ್ರೆ‘ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದ್ದು, ತುಂಗಭದ್ರಾ ಎಲ್ಎಲ್‌ಸಿ ಕಾಲುವೆಯಲ್ಲಿ ನೀರು ಹರಿಸುವ ವಿಚಾರ ಮಂಗಳವಾರ, ಬುಧವಾರ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು.

ಈ ಸ್ಥಳಕ್ಕೆ ಅಕ್ಟೋಬರ್‌ 29ರಂದು ನಾಗೇಂದ್ರ ಭೇಟಿ ನೀಡಿ, ನವೆಂಬರ್‌ 1ರಿಂದ ನೀರು ಬಿಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದರು. ಈ ಮಧ್ಯೆ, ಸಚಿವ ಬಿ.ಶ್ರೀರಾಮುಲು ನವೆಂಬರ್‌ 1ರಂದು ಮಂಗಳವಾರ ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದು, ಕಾಲುವೆಗೆ ನೀರು ಹರಿಸುವವರೆಗೆ ಅಲ್ಲೇ ಮೊಕ್ಕಾಂ ಹೂಡುವುದಾಗಿ ಪ್ರಕಟಿಸಿದ್ದರು.