ಮನೆ ರಾಜ್ಯ ಶ್ರೀರಂಗಪಟ್ಟಣ: ʻಮೂಲ ಮಂದಿರ ಚಲೋʼಗೆ ಅವಕಾಶ ನಿರಾಕರಿಸಿದ ಪೊಲೀಸರು

ಶ್ರೀರಂಗಪಟ್ಟಣ: ʻಮೂಲ ಮಂದಿರ ಚಲೋʼಗೆ ಅವಕಾಶ ನಿರಾಕರಿಸಿದ ಪೊಲೀಸರು

0

ಮಂಡ್ಯ (Mandya)-ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹನುಮಂತನ ಪೂಜೆಗೆ ಅವಕಾಶ ಕೋರಿ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಸಂಘಟನೆ ಸದಸ್ಯರು ಜೂ.4ರಂದು ನಡೆಸಲು ಉದ್ದೇಶಿಸಿದ್ದ ‘ಮೂಲ ಮಂದಿರ ಚಲೋ’ಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.

ಶಾಂತಿ ಕದಡುವ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿರುವ ಪೊಲೀಸರು ಮಸೀದಿ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜೂ.3ರ ಸಂಜೆ 6 ಗಂಟೆಯಿಂದ ಜೂ.5ರ ಬೆಳಿಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಗುರುವಾರ ಆದೇಶ ಹೊರಡಿಸಿದ್ದಾರೆ.

ಶಾಂತಿ ಕದಡುವ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಅನುಮತಿ ಕೇಳಿದವರಿಗೆ ನಿಯಮಗಳ ಕುರಿತಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇಷ್ಟಾದರೂ ಯಾವುದೇ ಚಟುವಟಿಕೆ ನಡೆಸಿದರೆ ಅಂಥವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದ್ದಾರೆ.

ಮಸೀದಿಯ ಸುತ್ತ ಬ್ಯಾರಿಕೇಡ್‌ ಹಾಕಲಾಗಿದ್ದು 3 ಕೆಎಸ್‌ಆರ್‌ಪಿ, 5 ಡಿಎಆರ್‌ ತುಕಡಿಗಳು ಭದ್ರತೆಗೆ ನಿಯೋಜಿಸಲಾಗಿದೆ. ನಿಷೇಧಾಜ್ಞೆ ಜಾರಿ ಇರುವ ಅವಧಿಯಲ್ಲಿ ಯಾವುದೇ ಸಭೆ, ಸಮಾರಂಭ, ಜಾಥಾ, ಪ್ರತಿಭಟನೆ, ರಥಯಾತ್ರೆ, ಉತ್ಸವ, ಮೆರವಣಿಗೆಗಳಿಗೆ ಅವಕಾಶ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಶ್ರೀರಂಗಪಟ್ಟಣದಲ್ಲಿ ನಡೆಯಬೇಕಿದ್ದ ಸಂತೆಯನ್ನು ಸ್ಥಳೀಯ ಪುರಸಭೆ ಭಾನುವಾರಕ್ಕೆ ಮುಂದೂಡಿದೆ.

ಹಿಂದಿನ ಲೇಖನಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ: ಅಜಿತ್‌ ದೋವಲ್‌ ಜೊತೆ ಅಮಿತ್‌ ಶಾ ತುರ್ತು ಸಭೆ
ಮುಂದಿನ ಲೇಖನಸಂತೂರ್ ಮಾಂತ್ರಿಕ ಭಜನ್ ಸೊಪೋರಿ ನಿಧನ