ಬೆಂಗಳೂರು(Bengaluru): ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಬಿಎಸ್ ವೈ ಉಪಯೋಗಿಸಿ ಮುಂದೆ ಅಧಿಕಾರಕ್ಕೆ ಬರಲು ಪ್ಲಾನ್ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಎಸ್ ವೈಗೆ 75 ವರ್ಷ ಆಗಿದೆ ಎಂದು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರು. ಈಗ ಮತ್ತೆ ಸ್ಥಾನ ನೀಡಿದ್ದಾರೆ. ಬಿಜೆಪಿ ನಾಯಕರಿಗೆ ಬಿಎಸ್ ವೈ ಮೇಲೆ ಈಗ ಪ್ರೀತಿ ಬಂತಾ..? ಬಿಜೆಪಿಗೆ ಬಿಎಸ್ ವೈ ಮಹತ್ವ ಗೊತ್ತಾಗಿದೆ ಎಂದರು.
ರಾಜಕೀಯ ನಿವೃತ್ತಿ ಬಗ್ಗೆ ಬಿಎಸ್ ವೈ ಹೇಳಿದ್ದರು. ಹಾಗಾಗಿ ಬಿಜೆಪಿಯಲ್ಲಿ ಕೆಲ ಬದಲಾವಣೆ ನಡೆದಿದೆ. ಬಿಎಸ್ ವೈ ಮೇಲೆ ಪ್ರೀತಿ ಇದ್ರೆ ಮುಂದಿನ ಸಿಎಂ ಎನ್ನಲಿ ನೋಡೋಣಾ ಎಂದು ಸವಾಲು ಹಾಕಿದರು.