ಮನೆ ಅಪರಾಧ ಬಿಜೆಪಿ ಶಾಸಕನ ಕಚೇರಿ ಮೇಲೆ ಕಲ್ಲು ತೂರಾಟ

ಬಿಜೆಪಿ ಶಾಸಕನ ಕಚೇರಿ ಮೇಲೆ ಕಲ್ಲು ತೂರಾಟ

0

ಬೆಳಗಾವಿ: ನಗರದಚವಾಟ ಗಲ್ಲಿಯಲ್ಲಿರುವ ಬಿಜೆಪಿ ಶಾಸಕ ಅನಿಲ ಬೆನಕೆ ಅವರ ಕಚೇರಿ ಮೇಲೆ ಸೋಮವಾರ ನಸುಕಿನಲ್ಲಿ ಕಲ್ಲುತೂರಾಟ ನಡೆದಿದೆ.

ಕಿಟಕಿಗಳ ಗಾಜುಗಳು ಪುಡಿ ಪುಡಿಯಾಗಿವೆ. ಇದರಿಂದ ‌ಆ ಗಲ್ಲಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ ಕಲ್ಲೆಸೆದಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದಿದೆ.