ಮನೆ ಅಪರಾಧ ಹುಲಿ ಉಗುರು ಮಾರಾಟ: ಅರಣ್ಯಾಧಿಕಾರಿಗಳಿಂದ ಇಬ್ಬರ ಬಂಧನ

ಹುಲಿ ಉಗುರು ಮಾರಾಟ: ಅರಣ್ಯಾಧಿಕಾರಿಗಳಿಂದ ಇಬ್ಬರ ಬಂಧನ

0

ಮೈಸೂರುಮೈಸೂರಿನಲ್ಲಿ ಹುಲಿ ಉಗುರು ಮತ್ತು ಅದರಿಂದ ತಯಾರಾದ ಆಭರಣಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಎರಡು ವಾರಗಳ ಅವಧಿಯಲ್ಲಿ ಮೈಸೂರು ಅರಣ್ಯ ಸಂಚಾರಿ ದಳ ಎರಡು ಪ್ರಕರಣಗಳನ್ನು ಭೇದಿಸಿ ಇಬ್ಬರನ್ನು ಬಂಧಿಸಿ, ಜಿಲ್ಲೆಯಲ್ಲಿ ಸುಮಾರು 10 ಹುಲಿ ಉಗುರುಗಳು ಮತ್ತು ಆಭರಣಗಳನ್ನ ವಶಪಡಿಸಿಕೊಂಡಿದೆ.

ಕೆಲವು ಆಭರಣ ಮಳಿಗೆಗಳ ಮಾಲೀಕರ ಕೋರಿಕೆಯ ಮೇರೆಗೆ, ಕಳ್ಳಸಾಗಾಣಿಕೆದಾರರು ಅರಣ್ಯ ಪ್ರದೇಶದಲ್ಲಿ ಹುಲಿಗಳು ಸತ್ತಾಗ ಹುಲಿ ಉಗುರುಗಳು ಮತ್ತು ಇತರ ಭಾಗಗಳನ್ನು  ಕದಿಯುತ್ತಾರೆ. ಅವುಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾರೆ ಎಂದು  ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ರಾಜಸ್ಥಾನದ ಆಭರಣ ಮಳಿಗೆ ಮಾಲೀಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲು ನಾವು ವಿಶೇಷ ತಂಡವನ್ನು ರಚಿಸಿದ್ದೇವೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.

ಹಿಂದಿನ ಲೇಖನಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳ ಷಡ್ಯಂತ್ರ: ಸಚಿವ ಬಿ.ಸಿ.ನಾಗೇಶ್
ಮುಂದಿನ ಲೇಖನಕೊರೋನಾ ಲಾಕ್‌ಡೌನ್‌: ಉದ್ಯೋಗ  ಕಳೆದುಕೊಂಡ 23 ಲಕ್ಷ ಮಂದಿ