ಈ ರೀತಿಯಾಗಿ ಪರಾಶರ ಮಾಹರ್ಷಿಯು ಹೇಳುತ್ತಿರಲು, ಮೈತ್ರೇಯಾನು ಆಶ್ಚರ್ಯಚಕಿತನಾಗಿ “ಆಚಾರ್ಯರೇ ! ಶ್ರೀ ಮಹಾಲಕ್ಷ್ಮಿ ದೇವಿಯು ಕಳಸ ರತ್ನಾಕರದಲ್ಲಿ ಸಾಗರ ಮಂತನ ವೇಳೆಯಲ್ಲಿ ಜನಿಸಿದ್ದಾಳೆ ಎಂದು ಹೇಳುತ್ತಾರಲ್ಲ, ಹಾಗಿದ್ದರೆ ನೀವು ಬೃಹನಂದನೆ ಎಂಬುದಾಗಿ ಹೇಳುತ್ತಿದ್ದೀರಿ ನನಗೆ ಇದು ಸಮನ್ವಯ ಬೋಧಿಸಿ ಕೃತಾರ್ಥರಾಗಿ” ಎಂದು ಪ್ರಾರ್ಥಿಸಿದನು.
ಆಗ ಪರಾಶರ ಮಾಹರ್ಷಿಯು ಶಿಷ್ಯನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ “ಮಗೂ ! ಸರ್ವಭೂತಮಾಯನಾದ ವಾಸುದೇವನ ಮಾಯಾಶಕ್ತಿಯು ಶ್ರೀ ಲಕ್ಷ್ಮಿ ರೂಪದಲ್ಲಿ ಆತನ ಅರ್ಧಾಂಗಿಯಾಗಿ ಪ್ರಸಿದ್ಧಿಯಾಗಿದ್ದಾಳೆ. ಈ ಪ್ರಪಂಚದಲ್ಲಿನ ಸಂಪತ್ಕರವಾದಂತಹ ವಸ್ತುಗಳೆಲ್ಲವೂ ಆಕೆಯನ್ನು ಪ್ರಬೋಧಿಸುವ ಚಿಹ್ನೆಗಳಾಗಿಯೇ ಆಗಿವೆ. ಜೀವಮಾನವ ಲೋಕಗಳಲ್ಲಿ ಕಾಣುವ ಸಕಲ ಚರಾಚರ ಕೃತಗಳಲ್ಲಿನ… ಸೌಂದರ್ಯ ರಾಶಿ ಆದಂತಹ ಸ್ತ್ರೀರೂಪಗಳೆಲ್ಲವೂ ಆ ರಮಾದೇವಿಯ ರೂಪಗಳೇ, ಪುರುಷಾಕೃತಿಗಳೆಲ್ಲವೂ ಹರಿಮಯವಾದವುಗಳೇ ಆಗಿದೆ.
ಹಿಂದೆ ದೇವಮಾನವರು ಕ್ಷೀರಸಾಗವನ್ನು ಮಂತಿಸಲು ಉದ್ಭವಿಸಿದ ಶ್ರೀ ಲಕ್ಷ್ಮಿ ದೇವಿಯನ್ನು ಮುರುಳಿಧರನು ವಿವಾಹವಾಗಿರಲು ವಿಷಯವೂ ಜಗತ್ಪ್ರಸಿದ್ಧವೇ ವೇದಪೂರಿತವಾದ ಸುಂದರ ಕಥೆಯನ್ನು ನನಗೆ ಮರೀಚಿ ಮಹರ್ಷಿಯು ಹೇಳಿದಂತೆಯೋ ಈಗ ನಾನು ನಿನಗೆ ಕುಲಂಕುಷವಾಗಿ ವಿವರಿಸುತ್ತೇನೆ ಕೇಳು” ಎಂದನು.















